ಪುನೀತ್‌ಗೆ ಸಾಹಿತ್ಯ ವಲಯ ನುಡಿನಮನ

ದೇವದುರ್ಗ.ನ.೨-ಪಟ್ಟಣದ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ನುಡಿನಮನ ಕಾರ್ಯಕ್ರಮ ಭಾನುವಾರ ಜರುಗಿತು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಅಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿ, ಪುನೀತ್‌ರಾಜ್‌ಕುಮಾರ ಅಕಾಲಿಕ ನಿಧನ ಸಿನಿಮಾ ರಂಗಕ್ಕೆ ಮಾತ್ರವಲ್ಲ, ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರೊಬ್ಬರ ಕಲಾವಿದರ ಮಾತ್ರವಲ್ಲ ಭಾವನಾ ಜೀವಿ. ಕಷ್ಟದ ಸಂದರ್ಭದಲ್ಲಿ ಮಿಡಿಯುವ ಸಹೃದಯಿ. ಅವರ ಅಕಾಲಿಕ ನಿಧನ ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಹೇಳಿದರು.
ಹಿರಿಯ ಪತ್ರಕರ್ತ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿದರು. ಬಸವ ಕೇಂದ್ರದ ಮಾಜಿ ಅಧ್ಯಕ್ಷರಾದ ಭಾನು ಪ್ರಕಾಶ ಖೇಣೇದ್, ಶ್ಯಾಮರಾವ್ ಕುಲಕರ್ಣಿ, ಸಾಹಿತಿ ಅಮರೇಶ ಬಲ್ಲಿದವ್, ವಕೀಲ ಪ್ರಕಾಶ ಅಬಕಾರಿ, ಬಸವರಾಜ ಗಾಣಧಾಳ, ಸುಭಾಶ್ಚಂದ್ರ ಪಾಟೀಲ್, ನರಸಿಂಗರಾವ್ ಸರಕೀಲ್, ಮೈನುದ್ದೀನ ಕಾಟಮಳ್ಳಿ, ವೆಂಕಟೇಶ ನೀಲಗಲ್, ಎಚ್.ಶಿವರಾಜ್ ಇತರರಿದ್ದರು.