ಪುನೀತ್‍ಗೆ ಗಾನಾಭಿಷೇಕದ “ಅಪ್ಪು ನಮನ”

ಕಲಬುರಗಿ:ನ.22: ಪುನೀತ್ ರಾಜ್‍ಕುಮಾರ್ ಎಂದೆಂದಿಗೂ ಅಮರ ಮತ್ತು ಅವರ ಮಾನವೀಯ ಮೌಲ್ಯಗಳು ಯುವಸಮೂಹದ ನಡುವೆ ಸ್ಮರಣೀಯರಾಗಿರುತ್ತದೆ. ಬದುಕಿನ ಮಹಾನ್ ಸಂದೇಶ ಸಾರುವ ‘ಅಪ್ಪು ನಮನ’ ವಿಶೇಷ ಕಾರ್ಯಕ್ರಮವನ್ನು ಕಲಬುರಗಿಯಲ್ಲಿ ನ.21 ರಂದು ಆಯೋಜಿಸಿ ಪುನೀತ್ ಅವರ ಮಾನವೀಯ ಮೌಲ್ಯಗಳಿಗೆ ಗಾನಾಭಿಷೇಕದ ಮೂಲಕ ಅಭಿಮಾನಿ ಬಳಗ ಗೌರವ ಸಲ್ಲಿಸಿದ ಅಪೂರ್ವ ಕ್ಷಣ.
ಕಲಬುರಗಿಯ ಆಶ್ರಯ ಗ್ರೂಪ್ ಆಫ್ ಹೋಟೆಲ್ಸ್‍ನವರ ಸಂಸ್ಥೆಗಳ ವಾರ್ಷಿಕೋತ್ಸವ ನಿಮಿತ್ತ ಕಲಬುರಗಿ ರಾಮಮಂದಿರ ಸಮೀಪದ ಅನಂತ ರೆಸಿಡೆಸ್ಸಿ ಆವರಣದಲ್ಲಿ ‘ಅಪ್ಪು ನಮನ’ ವಿಶೇಷ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಪುನೀತ್ ಕುಟುಂಬದ ಬಂಧು, ಹಿರಿಯ ಉದ್ಯಮಿಗಳಾದ ಚಂದ್ರಕಾಂತ ವೆಂಕಯ್ಯ ಗುತ್ತೇದಾರ ಪುನಿತ್ ಅವರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಜ್ಯೋತಿ ಬೆಳಗಿಸಿ ಪುನೀತ್ ಸ್ಮರಣೆಯ ‘ಅಪ್ಪು ನಮನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
‘ಅಪ್ಪು ಸ್ಮರಣೆಯ ಈ ಕಾರ್ಯಕ್ರಮದಿಂದ ವ್ಯಕ್ತಿಗೆ ಪೂಜೆಯಲ್ಲ ಮೌಲ್ಯಗಳಿಗೆ ಸಂದ ಪೂಜೆ’ ಎಂದು ಚಂದ್ರಕಾಂತ ಗುತ್ತೇದಾರ ಶ್ಲಾಘಿಸಿದರು. ಉದ್ಯಮಿ ಸತೀಷ್ ಗುತ್ತೇದಾರ ಮಾತನಾಡಿ ಹೇಗೆ ಬದುಕಬೇಕೆಂದು ಕಲಿಸಿದ ಪುನೀತ್ ವ್ಯಕ್ತಿಯೊಬ್ಬ ದೇವತ್ವ ಏರಿದ ಮಹಾನ್ ಹಾದಿ ತೋರಿಸಿದವರು ಎಂದು ಗುಣಗಾನ ಮಾಡಿದರು. ವೈದ್ಯರು ಹಾಗೂ ಪಾಲುದಾರರಾದ ಡಾ.ರಾಜೇಶ್ ಕಡೇಚೂರ್, ಪಾಲುದಾರರಾದ ಸುರೇಶ್ ಶೆಟ್ಟಿ ಮುಂಬಯಿ, ಕಿರಣ್ ಜತ್ತನ್, ರಾಮಪ್ಪ ನಾಯಕ, ವಿನಯ ಗುತ್ತೇದಾರ್, ಹಾಗೂ ಶ್ರೀಮತಿ ಜಮುನಾ ಅಶೋಕ್ ಗುತ್ತೇದಾರ ಇದ್ದರು.
ಕಾರ್ಯಕ್ರಮದಲ್ಲಿ ಏ. ಕೆ. ರಾಮೇಶ್ವರ, ಉದ್ಯಮಿ ಸಂತೋಷ್ ಸುಭಾಷ್ ಗುತ್ತೇದಾರ್, ಪ್ರವೀಣ್ ಜತ್ತನ್, ಆರ್. ಪಿ. ರೆಡ್ಡಿ, ಡಾ.ಚಿ.ಸಿ. ನಿಂಗಣ್ಣ, ನರಸಿಂಹ ಮೆಂಡನ್, ಶ್ರೀಕಾಂತ ಗುತ್ತೇದಾರ, ರಾಜೇಶ್ ಡಿ. ಗುತ್ತೇದಾರ, ಡಾ. ಸದಾನಂದ ಪೆರ್ಲ, ದಯಾನಂದ ಶೆಟ್ಟಿ, ಮಿಲಿತ್ ಹೆಗ್ಡೆ, ಮಹಾದೇವ ಗುತ್ತೇದಾರ, ವೆಂಕಟೇಶ ಕಡೇಚೂರ್, ನಾಗರಾಜ ಕುಲಕರ್ಣಿ, ಎಎಸ್‍ಐ ವಿಠ್ಠಲ್ ನರೋಣ, ಸುದರ್ಶನ್ ಜತ್ತನ್, ಹರ್ಷದ್, ಮತ್ತಿತರರು ಪುಷ್ಪಾರ್ಚನೆ ಸಲ್ಲಿಸಿ ಗೌರವಿಸಿದರು. ಮಹೇಶ್ ಕಡೇಚೂರ್ ಅವರು ರಚಿಸಿದ ಅಪ್ಪು ಭಾವಚಿತ್ರ ಹೊಂದಿದ ಕನ್ನಡ ಬಾವುಟಗಳನ್ನೊಳಗೊಂಡ ವಿಶೇಷ ಕಲಾಕೃತಿ ಎಲ್ಲರ ಗಮನ ಸೆಳೆಯಿತು.
ಸಂಜಯ್ ಕುಮಾರ್ ಮತ್ತು ಬಳಗ ಆರ್ಕೆಸ್ಟಾ ತಂಡದ ಸಂಗೀತ ಕಲಾವಿದರು ಪುನೀತ್ ನಟಿಸಿದ ಚಿತ್ರಗಳ ಹಾಡುಗಳನ್ನು ಹಾಡಿದರು. ವಿಜಯ ಕುಮಾರ್, ಪ್ರಿಯಾಂಕ, ಗೋಪಾಲ ಕುಲಕರ್ಣಿ, ಜಮುನಾ ಗುತ್ತೇದಾರ್, ನಿಂಗಪ್ಪ, ಮಾಲಿಪಾಟೀಲ್ ಹಾಡುಗಳನ್ನು ಹಾಡಿದರು. ‘ಬೊಂಬೆ ಹೇಳತೈತೆ’ ಹಾಡಿಗೆ ಅಭಿಮಾನಿಗರು ಕುಣಿದು ಕುಪ್ಪಳಿಸಿದರು. ಕಾಂತಾರ ಚಿತ್ರದ ಹಾಡಿಗೂ ಪ್ರೇಕ್ಷಕರು ತಲೆದೂಗಿದರು. ಪುನೀತ್ ನಟಿಸಿದ ಬಹುತೇಕ ಚಿತ್ರಗಳ ಹಾಡನ್ನು ಹಾಡಿ ‘ಅಪ್ಪು ನಮನ’ ಕಾರ್ಯಕ್ರಮದಲ್ಲಿ ಗಾನಾಭಿಷೇಕ ಸಲ್ಲಿಸಿದ ಕೃತಾರ್ಥ ಕ್ಷಣ ಅದಾಗಿತ್ತು. ಅಪ್ಪು ಭಾವಚಿತ್ರದ ಸಿಹಿತಿಂಡಿ ಪ್ಯಾಕೇಟ್ ಎಲ್ಲರ ಗಮನ ಸೆಳೆಯಿತು.