ಪುನೀತಗೆ ಶ್ರದ್ಧಾಂಜಲಿ- 500 ಕಿ.ಮೀ. ಓಟಕ್ಕೆ ಮುಂದಾದ ಮಹಿಳೆ

ಧಾರವಾಡ,ನ.28: ಖ್ಯಾತ ನಟ ಪುನೀತ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸುಮಾರು 500 ಕಿ.ಮೀ.ಗಿಂತಲು ಹೆಚ್ಚು ಓಡುವುದರ ಮೂಲಕ ನನ್ನ ಹುಟ್ಟೂರಾದ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಿಂದ ಬೆಂಗಳೂರಿನ ಪುನೀತರಾಜಕುಮಾರ ಅವರ ಸಮಾಧಿ ಸ್ಥಳದವರೆಗೆ ಸುಧೀರ್ಘ ಓಟವನ್ನು
( ಮ್ಯಾರಾಥಾನ್ ) ಕೈಗೊಳ್ಳಲು ನಿಶ್ಚಯಿಸಿದ್ದೇನೆ ಎಂದು ದ್ರಾಕ್ಷಾಯಣಿ ಉಮೇಶ ಪಾಟೀಲ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ದಿ.29 ಪುನೀತ್ ರಾಜಕುಮಾರ ಅವರ ತಿಂಗಳ ತಿಥಿ ದಿನದಂದು ಈ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇನೆ ಎಂದ ಅವರು ಮೂರು ಮಕ್ಕಳ ತಾಯಿಯಾಗಿರುವ ನಾನು ಕೊನೆಯ ಪುತ್ರಿ 11 ತಿಂಗಳಿನವಳಿದ್ದಾಳೆ ಎಂದು ತಿಳಿಸಿದರು.
ಪುನೀತರಾಜಕುಮಾರ ಅವರ ಅಭಿಮಾನಿಯಗಿ ಬೆಳೆದ ನಾನು ಅವರ ಹಠಾತ್ ನಿಧನದಿಂದ ಬಹಳ ದುಃಖಿತಳಾಗಿದ್ದೇನೆ. ವಿಧಿ ಆಟವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಅರಿತು ಅವರು ಮಾಡಿದ ಸಮಾಜಸೇವೆಗಳಿಂದ ಪ್ರೇರೇಪಿತಳಾಗಿ ನೇತ್ರದಾನ ಮತ್ತು ರಕ್ತದಾನಗಳನ್ನು ಪೆÇ್ರೀತ್ಸಾಹಿಸಲು ಮತ್ತು ನನ್ನ ಕ್ರೀಡೆಯ ಮೂಲಕವೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿರುವುದಾಗಿ ಹೇಳಿದರು.
ಬಾಲ್ಯದಿಂದಲೂ ನಾನು ಓಟದ ಕ್ರೀಡೆಯಲ್ಲಿ ಆಸಕ್ತಳಾಗಿದ್ದು , ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತೇನೆ . ಕ್ರೀಡಾಸಕ್ತಿಯ ಜೊತೆಗೆ ಕನ್ನಡದ ಖ್ಯಾತ ನಟ ಮತ್ತು ಸಮಾಜಸೇವಕರಾದ ಪುನೀತರಾಜಕುಮಾರ ಅವರ ಕಟ್ಟಾ ಅಭಿಮಾನಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ ಎಸ್ ಎಮ್. ಮನಗುಂಡಿ, ಪುಂಡಲೀಕ ಜಕ್ಕಣ್ಣವರ,ಶಿವಕುಮಾರ್ ಜಾಕೋಜಿ ,ಸಲ್ಮಾನ್ ಮಾರಡಗಿ,ಉಮೇಶ್ ಪಾಟೀಲ್, ಸುರೇಶ್ ಸಾವಂತ ಉಪಸ್ಥಿತರಿದ್ದರು.