ಪುನಿತ್ ಪುಣ್ಯ ತಿಥಿ-ಸಾಂಸ್ಕೃತಿಕ ಕಾರ್ಯಕ್ರಮ

ಕೋಲಾರ, ನ.೧೦: ತಾಲೂಕಿನ ಕಸಬಾ ಹೋಬಳಿಯ ಬೆಗ್ಲಿಹೊಸಹಳ್ಳಿ ಗ್ರಾಮದಲ್ಲಿ ಪುನಿತ್‌ರಾಜ್‌ಕುಮಾರ್ ರವರ ೧೧ನೇ ದಿನ ಪುಣ್ಯತಿಥಿಯ ಪ್ರಯುಕ್ತವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಗಾಯನ ಕಾರ್ಯಕ್ರಮ ಹಾಗೂ ಬಡ ಜನರಿಗೆ ಊಟದ ವ್ಯವಸ್ಥೆ ಸಹ ಏರ್ಪಡಿಸಿದ್ದರು.
ಕರ್ನಾಟಕ ಬಹುಜನ ಸಂಘದ ರಾಜ್ಯಾದ್ಯಕ್ಷ ಹಾಗೂ ಮುಖಂಡ ಬೆಗ್ಲಿಹೊಸಹಳ್ಳಿ ಕೆ.ವೆಂಕಟೇಶಪ್ಪ ಮಾತನಾಡಿ, ಪುನಿತ್‌ರಾಜ್‌ಕುಮಾರ್ ರವರು ಮಾಡಿರುವ ಸಮಾಜ ಸೇವೆಯನ್ನು ಸ್ಮರಿಸುತ್ತಾ, ಇಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ನಮ್ಮೆಲ್ಲರಿಗೂ ನೋವು ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೆಗ್ಲಿಹೊಸಹಳ್ಳಿ ಗ್ರಾಮದ ಅಂಬರೀಶ್, ಬೆಗ್ಲಿ ಮಂಜುನಾಥ, ರಮೇಶ್, ಮಹೇಶ್, ರವಿ, ಶ್ರೀನಿವಾಸ್, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ಶ್ರೀನಿವಾಸ್, ಮೂರ್ತಿ, ಬೆಗ್ಲಿಸಿರಾಜ್ ಇನ್ನು ಮುಂತಾದವರು ಉಪಸ್ಥಿತರಿದ್ದರು.