ಪುನಿತ್‌ರಾಜ್ ಕುಮಾರ ಮರೆಯದ ಮಾಣಿಕ್ಯ

ದೇವದುರ್ಗ.ಅ.೩೦- ಪವರ್ ಸ್ಟಾರ್ ದಿ.ಪುನಿತ್ ರಾಜ್‌ಕುಮಾರ ಅಭಿಮಾನಿಗಳು ಅವರನ್ನು ಕೇವಲ ನಟನಾಗಿ ಆರಾಧಿಸುತ್ತಿಲ್ಲ. ಸಮಾಜದ ಕಳಕಳಿಗೆ ಮಿಡಿದ ಹೃದಯವಂತ. ಹೀಗಾಗಿ ಪುನಿತ್ ಮರೆಯದ ಮಾಣಿಕ್ಯರಾಗಿ ಜನರ ಮನಸ್ಸಿನಲ್ಲಿ ಬೇರೂರಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ಇಂದಿರಾ ಕ್ಯಾಂಟಿನ್ ಮುಂದೆ ಸಮಾನ ಮನಸ್ಕರ ಗೆಳೆಯರ ಬಳಗ ಹಾಗೂ ಸವಿತಾ ಸಮಾಜದಿಂದ ಆಯೋಜಿಸಿದ್ದ ದಿ.ಪುನಿತ್ ರಾಜ್‌ಕುಮಾರರ ೨ ನೇ ಪುಣ್ಮಸರಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಪುನಿತ್ ರಾಜ್‌ಕುಮಾರ ಸಮಾಜದ ನೋವುಗಳಿಗೆ ಸದಾಕಲಾ ಸ್ಪಂದಿಸುತ್ತಿದ್ದರು. ಕರೊನಾ ಸಂಕಷ್ಟ ಸಮಯದಲ್ಲಿ ಸರ್ಕಾರಕ್ಕೆ ೫೦ ಲಕ್ಷ ರೂ. ದೇಣಿಗೆ ನೀಡಿ ಎಲ್ಲರ ಹೃದಯ ಗೆದ್ದಿದ್ದರು. ಇದಲ್ಲದೆ ಹಲವು ಸಂದರ್ಭದಲ್ಲಿ ಸಮಾಜಸೇವೆ ಮಾಡುವಲ್ಲಿ ಸದಾಮುಂದೆ ಬರುತ್ತಿದ್ದರು.
ತಂದೆಯಂತೆ ಪುನಿತ್ ಉತ್ತಮ ಸದಬಾಭಿರುಚಿಯ ಸಿನಿಮಾಗಳನ್ನು ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಹೀಗಾಗಿ ಅವರನ್ನು ಅಭಿಮಾನಿಗಳು ದೇವರಂತೆ ಪೂಜಿಸುತ್ತಾರೆ. ಪುನಿತ್ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು. ಮುಖಂಡರಾದ ತಿರುಪತಿ ಚೇರ್ಮನ್, ದಂಡಪ್ಪ, ರಮೇಶ, ಶೇಖರಪ್ಪ ಶಿರ್ವಾಳ, ಇಕ್ಬಾಲ್ ಸಾಬ್ ಆರಕೆರ, ರಾಜಣ್ಣ ಟೈಲರ್, ಗುಂಡಪ್ಪ ಇತರರಿದ್ದರು.