ಪುನಶ್ಚೇತನ ಕಾರ್ಯಗಾರ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ಜ13: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಪುನಶ್ಚೇತನ ಕಾರ್ಯಗಾರ ನಡೆಸಲಾಯಿತು.
ಭಾರತ ಸೇವಾದಳ ಜಿಲ್ಲಾ ಹಾಗೂ ತಾಲೂಕು ಸಮಿತಿಗಳು ಚಿತ್ರದುರ್ಗ ,ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿತ್ರದುರ್ಗ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೊಳಕಾಲ್ಮೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಪುನಶ್ಚೇತನ ಕಾರ್ಯಗಾರದಲ್ಲಿ ತಾಲೂಕು ನೌಕರ ಸಂಘದ ಅಧ್ಯಕ್ಷರಾದ ಈರಣ್ಣ ಮಾತನಾಡಿ, ಭಾರತ ಸೇವಾದಳ ದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ಶಿಕ್ಷಕ, ಶಿಕ್ಷಕಿಯರು ತಮ್ಮ ತಮ್ಮ ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸೇವಾ ದಳದ ನಿಯಮಗಳನ್ನು ಮತ್ತು ಶಾಂತಿ, ಶಿಸ್ತು ಮತ್ತು ದೇಶಾಭಿಮಾನ ರೂಡಿಸಿಕೊಳ್ಳುವಂತೆ ಹೇಳಬೇಕು ಮತ್ತು ಸೇವಾ ದಳ ನಡೆದು ಬಂದ ದಾರಿಯನ್ನು ಮತ್ತು ಉ ದೇಶವನ್ನು ತಿಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ ಭಾ ಸೇ ಅ ದೇವರತ್ನ, ಕೆ ಮಂಜುನಾಥ, ಓಂಕಾರಪ್ಪ, ಕರಿ ಬಸಣ್ಣ, ಉಪ ಪ್ರಾಚಾರ್ಯರು ರಾಜಣ್ಣ , ಬಸವರಾಜು ಪತ್ರಿ, ಸುಜಾತ ಪ್ರಾ ಶ ಸಂ ಅ ಕೆ. ಮಂಜುನಾಥ, ಗಂಗಾಧರ, ಪ್ರಸನ್ನ ಕುಮಾರ್, ಮತ್ತು ಶಾಲಾ ಶಿಕ್ಷಕರು ಬಾಗ ವಹಿಸಿದ್ದರು.