
ಆಲಮೇಲ :ಆ.26: ತಾಲ್ಲೂಕಿನ ತಾವರಖೇಡ ಗ್ರಾಮದಲ್ಲಿ ಹಕ್ಕು ಪತ್ರ ವಿತರಣಾ ಸಮಾರಂಭವನ್ನು ಆಯೋಜಿಸಿದ್ದು , ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ್ ಹಾಗೂ ಸಿಂದಗಿ ಶಾಸಕ ಅಶೋಕ ಮನಗೂಳಿಯವರಿಗೆ ಭವ್ಯ ಮೆರವಣಿಗೆಯಿಂದ ಸ್ವಾಗತಿಸಿದರು. ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೊನ್ನ ಬ್ಯಾರೇಜ್‍ನಿಂದ ಪ್ರವಾಹ ಪೀಡಿತ ಪ್ರದೇಶವಾಗಿತ್ತು. ಪ್ರವಾಹ ಪೀಡಿತದಿಂದ ಮನೆ, ಆಸ್ತಿ, ಭೀಮಾ ನದಿಯ ನೀರಿನಿಂದ ಭಾಧಿತವಾಗುತ್ತಿತ್ತು.
ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀ¯ರು 429 ಅರ್ಹ ಫಲಾನುಭವಿಗಳಲ್ಲಿ ಸಾಂಕೇತಿವಾಗಿ 11 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು, ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ನೀರಾವರಿ ಅಧಿಕಾರಿ ಲಕ್ಷ್ಮೀಕಾಂತ ಅವರು 56 ಎಕರೆ ಜಮೀನನ್ನು ಭೂ ಸ್ವಾದೀನ ಪಡಿಸಿಕೊಂಡು, ಪುನರ್ ವಸತಿ ನಿರ್ಮಾಣಕ್ಕೆ ವಿಜಯಪುರ ಜಿಲ್ಲೆಯ ಅಧಿಕಾರಿಗಳಿಗೆ ನೆರವು ನೀಡಿದ್ದು, ಇಲ್ಲಿನ ಅಧಿಕಾರಿಗಳು ಗ್ರಾಮದ ಜನತೆಗೆ ನೆಮ್ಮದಿ ಜೀವನ ನಡೆಸಲು ಮೂಲಭೂತವಾದಂತಹ ಸೌಲಭ್ಯಗಳನ್ನು ತಕ್ಷಣ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು. ಪುನರ್ ವಸತಿ ಕೇದ್ರಕ್ಕೆ ಸುಂದರವಾದಂತಹ ರಸ್ತೆ , ದೇವಸ್ಥಾನಗಳು, ಶಾಲೆ , ಬಸ್ ನಿಲ್ದಾಣ, ಎಲ್ಲಾ ವರ್ಗಕ್ಕೆ ಸಂಪೂರ್ಣವಾಗಿ ಅನುಕೂಲ ಸಿಗಬೇಕು. ರೈತರು, ಬಡವರ ಏಳಿಗೆಗಾಗಿ ಸರ್ಕಾರ ಬದ್ದವಾಗಿದೆ, ನಮ್ಮ ಸರ್ಕಾರ ನುಡಿದಂತೆ, ಖಚಿತ ಭರವಸೆಯೊಂದಿಗೆ ಈ ನಾಡಿನ ಜನತೆಗೆ ನೀಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ತಳವಾರ ಸಮಾಜದ ಬಾಂದವರು ಮಾಜಿ ಶಾಸಕ ಸುಣ್ಣಗಾರ ಶರಣಪ್ಪ ಅವರ ಮುಖಾಂತರ ನಿಜಶರಣ ಅಂಬಿಗರ ಚೌಡಯ್ಯನವರ ಭವನ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಶಾಸಕ ಅಶೋಕ ಮನಗೂಳಿ ಮಾತನಾಡಿ ಕಡಣಿ ಬ್ಯಾರೇಜ್ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಕಡಣಿಯಲ್ಲಿ 130 ಕೆ.ವಿ. ವಿದ್ಯುತ್ ಕೇಂದ್ರ ಈಗಾಗಲೇ ಮುಂಜೂರು ಇದ್ದು ತಕ್ಷಣ ಕಾರ್ಯರೂಪಕ್ಕೆ ತರಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಸಚಿವರು ಪ್ರತಿಕ್ರಯಿಸಿ ಶೀಘ್ರದಲ್ಲೇ ಇಲ್ಲಿಯ ಜನರ ಭರವಸೆ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಕಾರ್ಯದರ್ಶಿ ರಾಹುಲ್ ಶಿಂಧೆ, ಉಪವಿಭಾಗಾಧಿಕಾರಿ ಘದ್ವಾಲ್, ತಹಶೀಲ್ದಾರ್ ಸುರೇಶ್ ಚಾವಲರ,ಮಾಜಿ ಶಾಸಕ ಶರಣಪ್ಪ ಸುಣಗಾರ, ಗ್ರಾ.ಪಂ.ಅಧ್ಯಕ್ಷ ಬಸವಲಿಂಗ ಕತ್ತಿ , ಕಾಂಗ್ರೇಸ್ ಕಾರ್ಯಕರ್ತರು, ಗ್ರಾಮಸ್ಥರು, ಇದ್ದರು.