ಪುನರ್ಬಲನ ತರಗತಿ ಆರಂಭಿಸಲು ಮನವಿ

ಬಾದಾಮಿ, ಮೇ17: ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನರ್ಬಲನ ತರಗತಿಗಳನ್ನು ಮೇ 29 ರಿಂದ ಜೂನ್ 6 ರವರೆಗೆ ನಡೆಸಲು ಪ್ರೌಢಶಾಲಾ ಶಿಕ್ಷಕರ ಸಂಘ ತಾಲೂಕ ಘಟಕದ ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ.ಕುಂದರಗಿ ಇವರ ಮೂಲಕ ಬಿಇಒ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ತಾಲೂಕ ಅಧ್ಯಕ್ಷ ಬಿ.ಕೆ.ಚಿಮ್ಮಲ, ಕಾರ್ಯದರ್ಶಿ ಉಜ್ವಲ್ ಬಸರಿ, ಉಪಾಧ್ಯಕ್ಷ ಸಿ.ಎಂ.ಕಲ್ಲೂರ, ಸಂಘಟನಾ ಕಾರ್ಯದರ್ಶಿ ಮಹೇಶ ಕೋಟನಕರ, ಸಂಘದ ನಿರ್ದೇಶಕರಾದ ಬಸಮ್ಮ ನರಸಾಪುರ, ರವೀಂದ್ರ ಕಟ್ಟಿ, ಶಿಕ್ಷಕರಾದ ಎಂ.ಎಸ್.ಗ್ಯಾನಪ್ಪನವರ, ಬಿ.ಎಚ್.ಬಂಡಿವಡ್ಡರ, ಎಸ್.ಎಫ್.ಕಾಲಗಗ್ಗರಿ, ಎಸ್.ಪಿ.ಗೌಡರ, ಶಿವಾನಂದ ಮರಿಯಣ್ಣವರ, ಎಸ್.ಎಸ್.ದೇಸಾಯಿ, ವಿಷ್ಣು ಚೌಹಾಣ, ಎ.ಎ.ಮುಲ್ಲಾ, ರವಿಕುಮಾರ ರಾಥೋಡ ಸೇರಿದಂತೆ ಪ್ರೌಢಶಾಲಾ ಸಹಶಿಕ್ಷಕರು ಹಾಜರಿದ್ದರು.