ಪುದೀನಾ ಮಹಿಮೆ

ಪುದೀನಾಗೆ ಅದರದ್ದೇ ಆದಂತಹ ಮಹತ್ವವಿದೆ. ಇದು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಹಲವು ಪೋಷಕಾಂಶಗಳನ್ನ ಹೊಂದಿದೆ. ಅಜೀರ್ಣ, ಶೀತಕ್ಕೂ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲ, ಪುದೀನಾ ನಿಮ್ಮ ಚರ್ಮದ ಆರೋಗ್ಯವನ್ನ ಕಾಪಾಡುತ್ತದೆ. ಮೊಡವೆಗಳನ್ನ ನಿಯಂತ್ರಿಸುತ್ತದೆ.

ಕೀಟ ಕಚ್ಚಿ, ಬೊಬ್ಬೆಗಳು ಎದ್ದರೆ ಆ ಜಾಗಕ್ಕೆ ಪುದೀನಾ ಹಚ್ಚಿದರೆ ಬೇಗನೆ ವಾಸಿಯಾಗುತ್ತದೆ. ಪುದೀನಾದಲ್ಲಿ ಕ್ಯಾಲ್ಷಿಯಂ, ರಂಜಕ, ವಿಟಮಿನ್ ಸಿ, ಡಿ, ಇ ಮತ್ತು ವಿಟಮಿನ್ ಬಿ ಅಂಶಗಳಿವೆ. ಹೀಗಾಗಿ ನಿಮ್ಮ ಇಮ್ಯೂನಿಟಿಯನ್ನ ಹೆಚ್ಚಿಸುತ್ತದೆ.

ಇನ್ನು ಪುದೀನಾ ಬಾಯಿಯ ಆರೋಗ್ಯವನ್ನೂ ಕಾಪಾಡುತ್ತದೆ. ಪುದೀನಾದಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿಯಿದೆ. ಇದರಿಂದ ಹಲ್ಲುಗಳು ಹಾಳಾಗದಂತೆ ಕಾಪಾಡಿಕೊಳ್ಳಬಹುದು. ನಿಮ್ಮ ನಾಲಿಗೆ ಮತ್ತು ಹಲ್ಲುಗಳನ್ನು ಪುದೀನಾ ಸ್ವಚ್ಛವಾಗಿಡುತ್ತದೆ. ಇದರಿಂದಾಗಿ ಬಾಯಿ ವಾಸನೆಯ ಸಮಸ್ಯೆ ಇರಲ್ಲ.

ಶೀತ ಮತ್ತು ಕೆಮ್ಮಿಗೆ ಕೂಡ ಪುದೀನಾ ಒಳ್ಳೆಯ ಮದ್ದು. ಪುದೀನಾದಲ್ಲಿ ಆಯಂಟಿ ಬ್ಯಾಕ್ಟೀರಿಯಾ ಮತ್ತು ಉರಿಯೂತ ಕಡಿಮೆ ಮಾಡುವ ಗುಣಗಳಿರುವುದರಿಂದ ಶೀತ ಮತ್ತು ಕೆಮ್ಮು ಬೇಗನೆ ಕಡಿಮೆಯಾಗುತ್ತದೆ. ಪುದೀನಾ ಎಲೆಗಳನ್ನು ಹಲವು ರೀತಿಯಲ್ಲಿ ನೀವು ಬಳಸಬಹುದು. ಸಲಾಡ್ ಗೆ ಹಾಕಬಹುದು
ಅಥವಾ ಪುದೀನಾ ಚಹಾ ಸೇವಿಸಬಹುದು.

ಪುದೀನಾದಲ್ಲಿ ಆಯಂಟಿ-ಒಕ್ಸಿಡೆಂಟ್ಸ್ ಹಾಗೂ ಫೈಟೋನ್ಯೂಟ್ರಿಯೆಂಟ್ಸ್ ಇರುವುದರಿಂದ ಹೊಟ್ಟೆ ಮತ್ತು ಸ್ನಾಯುಗಳಿಗೆ ಅದು ರಿಲೀಫ್ ನೀಡುತ್ತದೆ.

ಇದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಅಜೀರ್ಣದಂತಹ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಮೈಗ್ರೇನ್ ಮತ್ತು ತಲೆನೋವಿಗೂ ಪುದೀನಾ ಪರಿಹಾರ ನೀಡುತ್ತದೆ.