ಪುತ್ರಿ ಬಗ್ಗೆ ಆರೋಪ: ಕಾಂಗ್ರೆಸ್ ನಾಯಕಿಗೆ ಸ್ಮೃತಿ ನೋಟೀಸ್

ನವದೆಹಲಿ, ಜು.24- ಗೋವಾದಲ್ಲಿ ಕೇಂದ್ರ ಸಚಿವರ ಪುತ್ರಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಆರೋಪದ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕರಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.

18 ವರ್ಷದ ತಮ್ಮ ಪುತ್ರಿಯ ಮೇಲೆ ಮಾಡಿರುವ ಆರೋಪವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಮತ್ತು ಬೇಷರತ್ ಕ್ಷಮೆಯಾಚಿಸುವಂತೆ ಅವರು ಒತ್ತಾಯಿಸಿದ್ದಾರೆ.

ಆರೋಪ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್, ನೆಟ್ಟಾ ಡಿ ಸೋಜಾ ಸೇರದಂತೆ ಅನೇಕ ನಾಯರಿಗೆ ಕೇಂದ್ರ ಸಚಿವ ಸ್ಮೃತಿ ಇರಾನಿ ನೋಟೀಸ್ ಜಾರಿ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್, ನೆಟ್ಟಾ ಡಿ’ಸೋಜಾ ಅವರು ತಮ್ಮ ಹೇಳಿಕೆಗೆ ಲಿಖಿತ ಬೇಷರತ್ ಕ್ಷಮೆಯಾಚಿಸಬೇಕು ಮತ್ತು ತಕ್ಷಣವೇ ಜಾರಿಗೆ ಬರುವಂತೆ ಮಾಡಿರುವ ಎಲ್ಲಾ ಆರೋಪಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಆರೋಪ ಸಾಬೀತು ಮಾಡಿ ಇಲ್ಲವೇ ಕ್ಷಮೆ ಯಾಚಿಸಿ ಇವರೆಡೂ ಮಾಡದಿದ್ದರೆ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುದು ಎಂದು ಲೀಗಲ್ ನೋಟೀಸ್ ನಲ್ಲಿ ಅವರು ತಿಳಿಸಿದ್ದಾರೆ