ಪುತ್ರಿ, ಪತ್ನಿ ಚಿತ್ರಗಳ ನಿರ್ಮಾಣ ಶಿವಣ್ಣ ದಿಲ್ ಖುಷ್…..

•             ಚಿ.ಗೋ ರಮೇಶ್

ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ಅವರಿಗೆ ಒಟ್ಟೊಟ್ಟಿಗೆ ಎರಡು ಖುಷಿ ಮತ್ತು ಸಂಭ್ರಮ, “ಫೈರ್ ಪ್ಲೈ” ಚಿತ್ರದ ಮೂಲಕ ಪುತ್ರಿ ನಿವೇದಿತಾ  ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಪತ್ನಿ ಗೀತಾ, ವೇದ ಚಿತ್ರದ ಯಶಸ್ಸಿನ ಬಳಿಕ ‘ಬೈರತಿ ರಣಗಲ್” ಚಿತ್ರ ನಿರ್ಮಾಣ ಕೈಗೆತ್ತಿಕೊಂಡಿದ್ದಾರೆ. ಪುತ್ರಿ ನಿರ್ಮಾಣದ ಸಿನಿಮಾ ದೀಪಾವಳಿಗೆ ತೆರೆಗೆ ಬರಲಿದ್ದು, ಪತ್ನಿ ನಿರ್ಮಾಣದ ಚಿತ್ರ ಆಗಸ್ಟ್ 15ಕ್ಕೆ ತೆರಗೆ ಬರಲಿದೆ. ಎರಡೂ ಚಿತ್ರದ ಪತ್ರಿಕಾಗೋಷ್ಠಿ ಶಿವಣ್ಣ ಅವರ ನಿವಾಸದಲ್ಲಿ ನಡೆಯಿತು. ಅಲ್ಲಿ ತಂಡ ಮಾಹಿತಿ ಹಂಚಿಕೊಂಡಿತು

ಸ್ವಾತಂತ್ರೋತ್ಸವಕ್ಕೆ ಬೈರತಿ ರಣಗಲ್ ತೆರೆಗೆ

ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ನರ್ತನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ” ಮಫ್ತಿ” ಚಿತ್ರ ಬಳಿಕ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಅದುವೇ ” ಬೈರತಿ ರಣಗಲ್ ” ಮಫ್ತಿ ಚಿತ್ರದ ಪ್ರೀಕ್ವೆಲ್ ಚಿತ್ರ ಇದಾಗಿದ್ದು ಆಗಸ್ಟ್ 15 ಕ್ಕೆ ಚಿತ್ರ ತೆರೆಗೆ ಬರಲಿದೆ.

ರಾಕ್ಷಸನಾಗಿದ್ದವನು ರಕ್ಷಕನಾಗಿ ಕಾಣುವ ಕಥೆ ಮಫ್ತಿ ಚಿತ್ರದಲ್ಲಿದ್ದರೆ, ಅದರ ಪೂರ್ವದಲ್ಲಿ ರಾಕ್ಷಸ ಹೇಗಾದ ಎನ್ನುವುದನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಅಳಿದುಳಿದ ಚಿತ್ರೀಕರಣ ಪೂರ್ಣಗೊಳಿಸಿ ಸ್ವಾತಂತ್ರೋತ್ಸವಕ್ಕೆ ಜನರ ಮುಂದೆ ಇಡಲು ತಂಡ ಸಜ್ಜಾಗಿದೆ.

ನಟ ಶಿವರಾಜ್ ಕುಮಾರ್ ಮಾತನಾಡಿ, ಕಾರಣ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದೆ. ಹೆಚ್ಚು ಕಡಿಮೆ ಶೇಕಡಾ 70 ರಷ್ಟು ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಮಫ್ತಿ ಚಿತ್ರ ಮಾಡುವ ವೇಳೆ ಸೆಕೆಂಡ್‍ಆಫ್ ನಲ್ಲಿ ಬರುವ ಪಾತ್ರ. ಒಪ್ಪಿಕೊಳ್ಳಬೇಕಾ ಬೇಡವಾ ಎನ್ನುವ ಗೊಂದಲವಿತ್ತು. ಜೊತೆಗೆ ಮಾವನ ಮಗ ಶ್ರೀಮರುಳಿ ನಾಯಕನಾಗಿದ್ದ ಅಂದ ಮೇಲೆ ನನ್ನ ಪಾತ್ರ ಯಾವಾಗ ಬೇಕಾದರೂ ಬರಲಿ, ನಾಯಕ ಯಾರೇ ಆಗಲಿ, ಚಿತ್ರ ಚೆನ್ನಾಗಿ ಬರಲಿ ಎನ್ನುವ ಕಾರಣಕ್ಕೆ ನಟಿಸಲು ಒಪ್ಪಿಕೊಂಡೆ, ಆನಂತರ  ಚಿತ್ರ ಮೂಡಿ ಬಂದ ಬಗೆ ಅಭಿಮಾನಿಗಳ ಪ್ರೋತ್ಸಾಹ ಬೈರತಿ ರಣಗಲ್ ಮಾಡಲು ಕಾರಣವಾಗಿದೆ. ಮುಂದೆ ಸೀಕ್ವಲ್, ಪ್ರೀಕ್ವೆಲ್ ಬರಬಹುದು ಎಂದರು

ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್, “ವೇದ”  ಚಿತ್ರದ ಬಳಿಕ ಎರಡನೇ ಚಿತ್ರ ಇದು. ಆಗಸ್ಟ್ 15ಕ್ಕೆ ಬಿಡುಗಡೆಯಾಗಲಿದೆ ಎಲ್ಲರ ಸಹಕಾರ ಬೆಂಬಲವಿರಲಿ ಎಂದು ಕೇಳಿಕೊಂಡರು.

70 ರಷ್ಟು ಚಿತ್ರೀಕರಣ ಪೂರ್ಣ

ಬೈರತಿ ರಣಗಲ್ ಆರಂಭಕ್ಕೆ ಶಿವಣ್ಣ ಕಾರಣ. ಶಿವಣ್ಣ ಡ್ರೆಸ್ ಹಾಕಿದರೆ ಅದರ ಖದರ್ ಬೇರೆ ರೀತಿ ಇರುತ್ತದೆ. ಮಪ್ತಿ ಚಿತ್ರದಲ್ಲಿ ಅವರ ಪಾತ್ರ ಸಾಕಾಗಲಿಲ್ಲ ಎನ್ನುವ ಬೈರತಿ ರಣಗಲ್ ಚಿತ್ರ ಮಾಡಲಾಗಿದೆ. ಗ್ಯಾಂಗ್ ಸ್ಟರ್ ಹೇಗೆ ಆಗುತ್ತಾರೆ. ಅದರ ಹಿಂದಿನ ಕಥೆ ಏನು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದ ಬಳಿ ಸೆಟ್ ಹಾಕಲಾಗಿದೆ. ಪೆನುಗೊಂಡ ,ಮೈಸೂರು, ಬಳ್ಳಾರಿ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ  ರುಕ್ಮಿಣಿ ವಸಂತ್,  ರಾಹುಲ್ ಬೋಸ್, ದೇವರಾಜ್, ಅವಿನಾಶ್ ಸೇರಿದಂತೆ ಮತ್ತಿತರಿದ್ಧಾರೆ ಮಫ್ತಿಯಲ್ಲಿ  ಕಲಾವಿದರು ಶೇಕಡಾ 50 ರಷ್ಟು ಮುಂದುವರಿದ್ದಾರೆ ಎಂದರು ನಿರ್ದೇಶಕ ನರ್ತನ್

ದೀಪಾವಳಿಗೆ ಫೈರ್ ಪ್ಲೈ

ನಿವೇದಿತಾ ಶಿವರಾಜ್ ಕುಮಾರ್ ಚೊಚ್ಚಲ ನಿರ್ಮಾಣದ ” ಫೈರ್ ಪ್ಲೆ” ಚಿತ್ರ ದೀಪಾವಳಿಗೆ ಬಿಡುಗಡೆಯಾಲಿದೆ. ಚಿತ್ರದ ಮೂಲಕ ಯುವ ನಟ ವಂಶಿಕೃಷ್ಣ ನಾಯಕನಾಗುವ ಮೂಲಕ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್ ಮಾತನಾಡಿ ಚಿತ್ರದ ಕಥೆ ಕೇಳಿ ಇಷ್ಡವಾಯಿತು. ಕೊನೆ ಹಂತದ ಚಿತ್ರೀಕರಣ ಬಾಕಿ ಇದೆ. ದೀಪಾವಳಿಗೆ ಚಿತ್ರ ಬಾರಿ ಸದ್ದಿನೊಂದಿಗೆ ಬಿಡುಗಡೆ ಆಗಲಿದೆ. ಅಪ್ಪನ. ಜೊತೆ ಸಿನಿಮಾ ಮಾಡುವ ಆಸೆ ಇದೆ.   ಅಜ್ಜಿಗಿಂತ ಹೆಚ್ಚಾಗಿ ಅಮ್ಮನಿಂದ ನಿರ್ಮಾಣದ ಕಲೆ ಕರಗತ ಮಾಡಿಕೊಂಡಿದ್ದೇನೆ. ನಿರ್ಮಾಣದ ಅನುಭವ ತಿಳಿದುಕೊಳ್ಳಲೆಂದೇ ಒಲವೆಬ್ ಸಿರೀಸ್ ನಿರ್ಮಾಣ ಮಾಡಿದ್ದು ಎಂದರು.

ಸಂಗೀತ ನಿರ್ದೇಶಕ ಚರಣ್ ರಾಜ್‍ಮಾತನಾಡಿ, ಯುವ ತಂಡದೊಂದಿಗೆ ಕೆಲಸ ಮಾಡಿದ್ದು ನನ್ನ ಅದೃಷ್ಟ. ಐದು ಹಾಡುಗಳಿವೆ ಮತ್ತಷ್ಟು ಹಾಡುಗಳು ಸೇರಿಕೊಳ್ಳಬಹುದು ಎಂದು ಮಾಹಿತಿ ನೀಡಿದರು

ಛಾಯಾಗ್ರಾಹಕ ಅಭಿಲಾಶ್ ಕಲ್ಲತ್ತಿ ಮಾತನಾಡಿ ಕಥೆ ಕೇಳಿದಾಗ ಇಷ್ಟ ಆಯ್ತು, ವಿಭಿನ್ನ ಪ್ರೇಮಿಂಗ್ ಮಾಡಿದ್ದೇವೆ ಎಲ್ಲರಿಗೂ ಇಷ್ಟವಾಗಲಿದೆ ಎಂದರು.

ವಿಭಿನ್ನ ಜಾನರ್ ಚಿತ್ರ

ಫೈರ್ ಫ್ಲೈ ವಿಭಿನ್ನ ಜಾನರ್ ಚಿತ್ರ. ಇಂತಹುದೇ ಜಾನರ್ ಚಿತ್ರ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ ಆದರೆ ಜನರಿಗೆ ಒಳ್ಳೆಯ ಚಿತ್ರ ನೀಡುವುದು ನಮ್ಮ ಉದ್ದೇಶ ಎಂದರು ನಟ, ನಿರ್ದೇಶಕ ವಂಶಿ ಕೃಷ್ಣ.

ಚಿತ್ರಕ್ಕೆ  ಹತ್ತು ದಿನದ ಚಿತ್ರೀಕರಣ ಬಾಕಿ ಇದೆ. ದೊಡ್ಡ ನಿರ್ಮಾಣ ಸಂಸ್ಥೆಯಲ್ಲಿ ನಟನಾಗಿ, ನಿರ್ದೇಶಕನಾಗಿ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಚಿತ್ರದಲ್ಲಿ ನಾಯಕಿ ಇದ್ದಾರೆ. ಯುಗಾದಿಗೆ ಟೀಸರ್ ಬಿಡುಗಡೆ ಮಾಡಲಾಗುವುದು.ಇದೊಂದು ನರೆಟೀವ್ ಸಿನಿಮಾ .ಪ್ರತಿ ಪ್ರೇಮ್ ಚೆನ್ನಾಗಿ ಬಂದಿದೆ. ಮನರಂಜನೆ ಜೊತೆಗೆ ಎಮೋಷನ್‍ಗೂ ಆದ್ಯತೆ ನೀಡಲಾಗಿದೆ ಎಂದು ವಿವರ ನೀಡಿದರು.