ಪುತ್ರನ ಭಾವಚಿತ್ರದೊಂದಿಗೆ ಪೋಷಕರು ಸಿನಿಮಾ ವೀಕ್ಷಣೆ ಮರುಗಿದ ನಟ ಪುನೀತ್


ಬೆಂಗಳೂರು,ಏ.೫-ಮೈಸೂರಿನ ಮುರಳಿಧರ್ ಹಾಗು ಕುಟುಂಬದವರು ಅವರ ದಿ.ಪುತ್ರ ಹರಿಕೃಷ್ಣನ್ ಫೊಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು ಎಂದು ನಟ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ.
ಈ ವಿಷಯ ತಿಳಿದು ನಟ ಪುನೀತ್ ರಾಜ್ ಕುಮಾರ್ ಘಟನೆಗೆ ಮಮ್ಮಲ ಮುರಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದು, ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.
ಮುರುಳೀಧರ್ ಎಂಬುವವರ ಪುತ್ರ ಹರಿಕೃಷ್ಣನ್ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನಪ್ಪಿದ್ದ. ಆತ ನಟ ಪುನೀತ್ ಅಭಿಮಾನಿಯಾಗಿದ್ದು, ಯುವರತ್ನ ನೋಡಬೇಕೆಂದು ಆಸೆಪಟ್ಟಿದ್ದ. ಮಗನ ಆಸೆಯನ್ನು ತೀರಿಸುವ ಸಲುವಾಗಿ, ಸಾವನಪ್ಪಿದ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು ಫೊಟೋ ಇಟ್ಟುಕೊಂಡು ಪೊಷಕರು ಸಿನಿಮಾ ವೀಕ್ಷಿಸಿದ್ದಾರೆ.
ಪೋಷಕರ ಈ ಕ್ರಮ ಪುನೀತ್ ರಾಜ್ ಕುಮಾರ್ ಮತ್ತು ಅವರ ಅಭಿಮಾನಿಗಳ ಹೃದಯ ಕಲಕುವಂತೆ ಮಾಡಿದೆ