ಪುತ್ರನಿಗೆ ವಾಯು ಎಂದು ಹೆಸರಿಟ್ಟ ಸೋನಂ – ಅಹುಜಾ ದಂಪತಿ

ಮುಂಬೈ, ಸೆ ೨೧- ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಅವರ ಪತಿ ಆನಂದ್ ಅಹುಜಾ ತಮ್ಮ ನವಜಾತ ಮಗನಿಗೆ ವಾಯು ಎಂದು ನಾಮಕರಣ ಮಾಡಿದ್ದಾರೆ.

ಬಾಲಿವುಡ್ ಸ್ಟೈಲ್ ಡೀವಾ ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ಆಗಸ್ಟ್೨೦ರಂದು ಕುಟುಂಬಕ್ಕೆ ಗಂಡು ಮಗುವನ್ನು ಬರ ಮಾಡಿಕೊಂಡರು. ತಂದೆಯಾದ ಖುಷಿಯಲ್ಲಿ ಆನಂದ್ ಮತ್ತು ತಾತ ಅನಿಲ್ ಕಪೂರ್ ಇಡೀ ಆಸ್ಪತ್ರೆಗೆ ಸಿಹಿ ಹಂಚಿ ಸಂಭ್ರಮಿಸಿದ್ದರು.

ನಿನ್ನೆ ನಾಮಕರಣ ಮತ್ತು ೧ ತಿಂಗಳ ಬರ್ತಡೇ ಆಚರಣೆ ಮಾಡಿದ್ದಾರೆ. . ಇನ್‌ಸ್ಟಾಗ್ರಾಂನಲ್ಲಿ ಮಗನ ಹೆಸರು ಜೊತೆಗೆ ಅದರ ಅರ್ಥವನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ.

ಮಗುವಿನ ನಾಮಕರಣ ಶಾಸ್ತ್ರ ನೆರವೇರಿಸಿರುವ ದಂಪತಿ ವಾಯು ಕಪೂರ್ ಅಹುಜಾ ಎಂದು ಹೆಸರಿಸಿದ್ದಾರೆ. ವಾಯು ಹಿಂದೂ ಧರ್ಮ ಗ್ರಂಥದ ಪ್ರಕಾರ ಪಂಚಭೂತಗಳಲ್ಲಿ ಒಂದು, ವಾಯು ಉಸಿರಾಟಕ್ಕೆ ದೇವರು, ಹನುಮಂತನ ತಂದೆ ಹೆಸರು. ಈ ಕಾರಣಕ್ಕೆ ಈ ಹೆಸರು ನೀಡಲಾಗಿದೆ’ ಎಂದು ಸೋನಂ ವಿವರಣೆ ನೀಡಿದ್ದಾರೆ.

’ನಮ್ಮ ಬದುಕಿಗೆ ಹೊಸ ಅರ್ಥವನ್ನು ತುಂಬಿದ ಶಕ್ತಿಯ ಉತ್ಸಾಹದಲ್ಲಿ…ಅಗಾಧವಾದ ಧೈರ್ಯ ಮತ್ತು ಶಕ್ತಿಯನ್ನು ಒಳಗೊಂಡಿರುವ ಹನುಮಂತ ಮತ್ತು ಭೀಮನ ಆತ್ಮದಲ್ಲಿ…ಪವಿತ್ರವಾದ, ಜೀವ ನೀಡುವ ಮತ್ತು ಶಾಶ್ವತವಾಗಿ ನಮ್ಮದಾಗಿರುವ ಎಲ್ಲದರ ಉತ್ಸಾಹದಲ್ಲಿ, ನಾವು ನಮ್ಮ ಮಗನಿಗೆ ವಾಯು ಕಪೂರ್ ಅಹುಜಾಗೆ ಎಂದು ನಾಮಕರಣ ಮಾಡುತ್ತೇವೆ. ನಿಮ್ಮ ಆಶೀರ್ವಾದವನ್ನು ಬಯಸುತ್ತೇವೆ’ ಎಂದು ಸೋನಂ ಬರೆದುಕೊಂಡಿದ್ದಾರೆ.