ಪುತ್ರನಿಗೆ ಪಟ್ಟಕಟ್ಟಲು ವಿಫನರಾದ ಆನಂದ್ ಸಿಂಗ್


ಎನ್.ವೀರಭದ್ರಗೌಡ
ಬಳ್ಳಾರಿ: ಅಕ್ರಮ ಗಣಿಗಾರಿಕೆಯ ಹಣದ ಮದದಿಂದ ಪಕ್ಷದಿಂದ ಪಕ್ಷಕ್ಕೆ ಜಂಪ್ ಮಾಡುತ್ತ. ಶಾಸಕರಾಗಿ ಆಯ್ಕೆಯಾಗುತ್ತಿದ್ದ ಹೊಸಪೇಟೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಈ ಬಾರಿ ಚುನಾವಣೆಯಲ್ಲಿ ಮಗನಿಗೆ ಪಟ್ಟಾಭಷೇಕ ಮಾಡಲು ಹೋಗಿ ವಿಫಲರಾಗಿದ್ದಾರೆ.

ಕಾಂಗ್ರೆಸ್ ನಿಂದ ಗೆದ್ದು, ಸಕಾರಣ ನೀಡದೆ, ಜಿಂದಾಲ್ ಮೇಲೆ ಮುನಿಸು ತೋರಿಸಿ, ಜಿಲ್ಲೆಯನ್ನು ತುಂಡರಿಸಿ, ವಿಜಯನಗರ ಜಿಲ್ಲೆ ಸೃಷ್ಟಿಸಿ ವಿಜಯನಗರ ಸಾಮ್ರಾಜ್ಯದ ದೊರೆಯಂತೆ ಮೆರೆದು, ಮತದಾರರ ಕೆಂಗಣ್ಣಿಗೆ ಗುರಿಯಾದ ಆನಂದ್ ಸಿಂಗ್ ಗೆ ಜನತೆ ಬುದ್ದಿ ಕಲಿಸಿದಂತಿದೆ.

ವಿಜಯನಗರ ಎಂಬ ಪದ ಬಳಜೆ ಮಾಡಿದ್ದಕ್ಕೆ ಯಶಸ್ಸು ಇಲ್ಲ ಎಂಬ ಪ್ರತೀತಿ ಇದ್ದರೂ, ಅದನ್ನೇ ಬಳಸಿಕೊಂಡು ಮೆರೆದ ಸಿಂಗ್ ಅವರ ಆನಂದಕ್ಕೆ ತಣ್ಣೀರಿರಚಿದ್ದಾರೆ.

ಮಗ ಸಿದ್ದಾರ್ಥ ಸಿಂಗ್ ಎಂಬ ಹಸುಳೆಯನ್ನು ನಿಲ್ಲಿಸಿ ಪಟ್ಟ ಕಟ್ಟಲು ಮಾಡಿದ ಮೊದಲ ಪ್ರಯತ್ನಕ್ಕೆ ತೀವ್ರ ಮುಖಭಂಗವಾಗಿದೆ.

ಕಳೆದ ಎರೆಡು ಬಾರಿ ಸೋಲು ಕಂಡಿದ್ದ ಸರಳ ಸಜ್ಜನಿಕೆಯ ಗವಿಯಪ್ಪ ಅವರಿಗೆ ಜನ ಬೆಂಬಲ ನೀಡಿದ್ದಾರೆ.
ಹಣಕ್ಕಿಂತ ಜನ‌ಬೆಂಬಲ ಮುಖ್ಯ ಎಂಬುದನ್ನು ಕ್ಷೇತ್ರದ ಮತದಾರ ತೋರಿಸಿದ್ದಾನೆ ಎನ್ನಬಹುದು.