
ಚನ್ನಮ್ಮನ ಕಿತ್ತೂರ,mಂ.18: 12ನೇ ಶತಮಾನದಲ್ಲಿ ಯಾವುದೇ ಧರ್ಮಕ್ಕೆ ಸೀಮಿತವಾಗದೇ ನಾವೇಲ್ಲರೂ ಒಂದೇ ಎಂದು ಬಸವಣ್ಣವರು ಧರ್ಮ ಸ್ಥಾಪನೆ ಮಾಡಿದರು ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ಸಮೀಪದ ಖಾನಾಪೂರ ತಾಲೂಕ ಗಂಧದನಾಡು ಗಂದಿಗವಾಡ ಗ್ರಾಮದಲ್ಲಿ ವಿಶ್ವಗುರು ಬಸವಣ್ಣವರ ಪುತ್ಥಳಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು.
ಇಂದಿನ ಯುವಪಿಳಿಗೆ ತಮ್ಮ ಹಿರಿಯರನ್ನು ಸ್ಮರೀಸಲೆಂದು ಇಂತಹ ಮಹಾನ್ ಪುರುಷರ ಮೂರ್ತಿಗಳನ್ನು ಸ್ಥಾಪಿಸಬೇಕಾಗಿದೆ. ಸ್ಥಾಪಿಸದರಷ್ಟೇ ಸಾಲದು ಇದನ್ನು ಕಾಯ್ದುಕೊಂಡು ಹೋಗುವ ಜವಾಬ್ದಾರಿ ಸರಕಾರದ್ದು ಮತ್ತು ಸಾರ್ವಜನಿಕರದ್ದಾಗಿದೆ ಎಂದರು.
ಮೂರ್ತಿ ಪೂಜೆಗೈದು ಮಾತನಾಡಿದ ಬಿಜೆಪಿ ಮುಖಂಡ ವಿಠ್ಠಲ ಹಲಗೇಕರ ನನ್ನ ಹಿಂದಿನ ಜನ್ಮದ ಪುಣ್ಯ ನಾನು ಬಸವಣ್ಣವರ ವಚನ ಓದಿದ್ದು ಅದು ನನಗೆ ಇಂದು ಶ್ರೀರಕ್ಷೆಯಾಗಿದೆ. ಈ ಗ್ರಾಮಕ್ಕೆ ಮೂರ್ತಿ ದೇಣಿಗೆಯಾಗಿ ನೀಡಿದ್ದೇನೆ ಎಂದರು.
ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿದ ಪಿಕೆಪಿಎಸ್ ಅಧ್ಯಕ್ಷ ಅಶೋಕ ಯಮಕನಮರಡಿ ಸಾರ್ವಜನಿಕರ ಸಹಕಾರದಿಂದ ನಾವು ಮಾಡಿದ ಕೆಲಸ ಸೂರ್ಯ-ಚಂದ್ರ ಇರುವರೆಗೂ ಉಳಿಯುತ್ತದೆ. ಇಂತಹ ಕೆಲಸವಾಗಬೇಕಾದರೆ ಗ್ರಾಮದ ಸಹಕಾರ ಮುಖ್ಯ. ಅದನ್ನು ಉಳಿಸಿ ಬೆಳೆಸುವ ಕೆಲಸ ಗ್ರಾಮಸ್ಥರ ಮೇಲಿದೆಯೆಂದರು.
ಪ್ರಾಸ್ತಾವಿಕವಾಗಿ ವಚನ ಸಾಹಿತ್ಯದ ಕುರಿತು ಶ್ರೀ ಚನ್ನಬಸವೇಶ್ವರ ದೇವರು ಬೀಳ್ಕಿ ಹಾಗೂ ಶ್ರೀ ಮೃತ್ಯುಂಜಯ ಸ್ವಾಮಿಜೀ ರಾಜಗುರು ಹಿರೇಮಠ, ಮಾತನಾಡಿzರರು ಸ್ವಾಗತ ನಿರೂಪಣೆ ವಂದನಾರ್ಪಣೆ ಶಿಕ್ಷಕ ವಿವೇಕ ಕುರಗುಂದ ಅಥಿತಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಮಲ್ಲವ್ವ ನಾಯ್ಕರ, ವಿಜಯ ಕುಲಕರ್ಣಿ, ಬಸವರಾಜ ಹಿಟ್ಟನ, ಬಾಬು ಮುಲಿಮನಿ, ವೀರಭದ್ರಯ್ಯ ಚಿಕ್ಕಮಠ, ಲೈಲಾ ಶುಗರ್ಸ್ ಎಂ.ಡಿ., ಸದಾನಂದ ಪಾಟೀಲ ಶ್ರೀಕಾಂತ ಇಟಗಿ, ಸುಬಾಸ್ ಗೋಶೆಟ್ಟಿ, ಬಸವರಾಜ ಸಾಣಿಕೊಪ್ಪ, ಜಗದೀಶ ಮೂಲಿಮನಿ, ಗ್ರಾ.ಪಂ. ಸರ್ವ ಸದಸ್ಯರು, ಹಿರಿಯರು, ಯುವಕರು, ಸಾರ್ವಜನಿಕರು, ಮುಖಂಡರು, ಕಮೀಟಿಯ ಸರ್ವ ಸದಸ್ಯರು ಸೇರಿದಂತೆ ಹಲವರಿದ್ದರು.