ಪುತ್ತೂರು ಪ್ರಜ್ಞಾ ಆಶ್ರಮದಲ್ಲಿ ಜ್ಞಾನದೀಪ ಸಂಸ್ಥೆಯಿಂದ ವಿಶಿಷ್ಟ ರೀತಿಯ ದೀಪಾವಳಿ

ಸುಳ್ಯ:ನಾಡಿನೆಲ್ಲೆಡೆ ಹಬ್ಬದ ಸಂಭ್ರಮ ಮೇಳೈಸುತ್ತಿದ್ದರೆ ಪುತ್ತೂರು ಸಮೀಪದ ಕರ್ಮಲ ಬನ್ನೂರಿನ ಪ್ರಜ್ಞಾ ಮಾನಸಿಕ ವಿಕಚೇತನರ ಪುನರ್ವಸತಿ ಕೇಂದ್ರದ ಆಸ್ರಮದಲ್ಲಿ ಸುಳ್ಯ ಮತ್ತು ಬೆಳ್ಳಾರೆಯಲ್ಲಿ ಕಾರ್ಯರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ, ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ ವತಿಯಿಂದ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ ನಡೆಯಿತು.
ಬರ್ನೂರು ಕರ್ಮಲದ ಬಾಡಿಗೆ ಮನೆಯೊಂದರಲ್ಲಿ ನಾಲ್ಕು ವರ್ಷಗಳಿಂದ ೧೨ ಮಂದಿ ಮಾನಸಿಕ ವಿಕಲಚೇತನರನ್ನು ಸಲಹಿ ಅವರ ಬದುಕಿಗೆ ಬೆಳಕು ತೋರುತ್ತಿರುವ ಪ್ರಜ್ಞಾ ಆಶ್ರಮದಲ್ಲಿ ಬುಧವಾರ ಹಬ್ಬದ ವಾತಾವರಣ. ದೀಪಾವಳಿಯ ವಿಶಿಷ್ಟ ರೀತಿಯ
ಆಚರಣೆ ಇಲ್ಲ್ಲಿ ನಡೆಯಿತು. ಜ್ಞಾನದೀಪ ಸಂಸ್ಥೆಯ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರು ಹಾಗೂ ಸಿಬಂದಿಗಳು ಆಶ್ರಮವಾಸಿಗಳ ಜೊತೆ ಬೆರೆತು ದೀಪಾವಳಿ ಆಚರಿಸಿದರು.
ರಂಗೋಲಿ ಬಿಡಿಸಿ, ಹಣತೆ ಹಚ್ಚಿದರು.
ಆಶ್ರಮದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಅಣ್ಣಪ್ಪ ಮತ್ತು ಜ್ಯೋತಿ ದಂಪತಿಯನ್ನು ಜ್ಞಾನದೀಪ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಸ್ತಾವಿಸಿ ಸ್ವಾಗತಿಸಿದರು. ಉಪನ್ಯಾಸಕರುಗಳಾದ ಜಲಜಾಕ್ಷಿ, ಅಮಿತಾ ವೈ ಶೆಟ್ಟಿ, ಗೀತಾ ಬಾಲಚಂದ್ರ, ಕಂಪ್ಯೂಟರ್ ಶಿಕ್ಷಕಿ ಹೇಮಲತಾ ಹಿರಿಯ ವಿದ್ಯಾರ್ಥಿ ಜೀವನ್, ಸಂಸ್ಥೆಯ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರು ಉಪಸ್ಥಿತರಿದ್ದರು. ಗಣೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.