ಪುತ್ತೂರು ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷರಾಗಿ ಶ್ರವಣ್-ಕಾರ್ಯದರ್ಶಿಯಾಗಿ ಸಂದೀಪ್ ಆಯ್ಕೆ

ಪುತ್ತೂರು, ನ.೯- ಪುತ್ತೂರು ತಾಲೂಕು ಪತ್ರಕರ್ತರ ಸಂಘದ ೨೦೨೦-೨೧ನೇ ಸಾಲಿನ ನೂತನ ಅಧ್ಯಕ್ಷರಾಗಿ ಪತ್ರಕರ್ತ ಶ್ರವಣ್ ಕುಮಾರ್ ನಾಳ ಆಯ್ಕೆಯಾಗಿದ್ದಾರೆ.
ಶನಿವಾರ ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಹೊಸ ಸಾಲಿನ ಚುನಾವಣಾ ಪ್ರಕ್ರಿಯೆ ನಡೆಯಿತು. ಸಂಘದ ಹಿರಿಯ ಸದಸ್ಯ ಬಿ.ಟಿ. ರಂಜನ್ ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.


ಕಾರ್ಯದರ್ಶಿಯಾಗಿ ಐ.ಬಿ. ಸಂದೀಪ್ ಕುಮಾರ್, ಉಪಾಧ್ಯಕ್ಷರಾಗಿ ಸರ್ವೇಶ್ ಕುಮಾರ್ ಮತ್ತು ಅನೀಶ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಅಜಿತ್, ಕೋಶಾಧಿಕಾರಿಯಾಗಿ ಕೃಷ್ಣ ಪ್ರಸಾದ್ ಬಲ್ನಾಡ್ ಆಯ್ಕೆಯಾದರು. ಕೆ.ಎಸ್. ಬಾಲಕೃಷ್ಣ ಕೊಲ ಮತ್ತು ನಾಗರಾಜ್ ಕಡಬ ಸಹಾಯಕ ಚುನಾವಣಾ ಅಧಿಕಾರಿಯಾಗಿ ಸಹಕರಿಸಿದರು. ನಿರ್ಗಮನ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಮತ್ತು ಕಾರ್ಯದರ್ಶಿ ನಾಗರಾಜ್ ಕಡಬ ನೂತನ ತಂಡಕ್ಕೆ ಅಧಿಕಾರ ಹಸ್ತಾಂತರಿಸಿದರು.
ವಾರ್ಷಿಕ ಸಭೆ: ಚುನಾವಣಾ ಪ್ರಕ್ರಿಯೆಗೆ ಮುನ್ನ ೨೦೧೯-೨೦ನೇ ಸಾಲಿನ ವಾರ್ಷಿಕ ಸಭೆ ವರದಿ ಸಾಲಿನ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ನಾಗರಾಜ್ ಕಡಬ ೨೦೧೯-೨೦ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಕೃಷ್ಣ ಪ್ರಸಾದ್ ಬಲ್ನಾಡ್ ೨೦೧೯-೨೦ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ಪದಾಧಿಕಾರಿಗಳಾದ ಸಿದ್ದಿಕ್ ಕುಂಬ್ರ, ನಝೀಜ್ ಕೊಲ ಉಪಸ್ಥಿತರಿದ್ದರು.