ಪುಣ್ಯ ಸ್ಮರಣೆ ಕಾರ್ಯಕ್ರಮ


ಶಿರಹಟ್ಟಿ,ಜ.21: ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಜ್ಞಾನ ದಾಸೋಹಿ, ಅನ್ನದಾಸೋಹಿ, ಸಿದ್ದಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಜಿಗಳ ಮತ್ತು ಡಾ,ಪಂಡಿತ ಪುಟ್ಟರಾಜಕವಿಗವಾಯಿಗಳವರ ಪುಣ್ಯ ಸ್ಮರಣೆ ಹಾಗೂ ವಿಜಾಪೂರದ ಸಿದ್ದೇಶ್ವರ ಮಹಾಸ್ವಾಮಿಜಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಅರುಣ ಗಡ್ಡಿಮಾತನಾಡಿ, ಕನ್ನಡ ನಾಡಿನಲ್ಲಿ ನಡೆದಾಡುವ ದೇವರುಗಳು ಎಂದೇ ಖ್ಯಾತರಾಗಿ ಕನ್ನಡ ನಾಡಿನ ಜನತೆಗೆ ಅಷ್ಟೇ ಅಲ್ಲ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಸಂತರಾಗಿ ಜನರ ಮನಸ್ಸನ್ನು ಪರಿವರ್ತನೆಗೊಳಿಸಿದವರಾಗಿದ್ದು, ಇವರೆಲ್ಲರ ಪುಣ್ಯ ಸ್ಮರಣೆ ಮಾಡುವುದೇ ಮಹಾಪುಣ್ಯವಾಗಿದೆ. ಆದ್ದರಿಂದ ನಾವೆಲ್ಲ ಇವರೆಲ್ಲ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಯುವುದು ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರಣು ಮಠದ, ಮಹೇಶ ಮಾದೇವಪ್ಪನವರ, ವಿಜಯ ಗಾಂಜಿ, ಜನಾರ್ಧನ ಶೇಷನಗೌಡ, ರಾಘವೇಂದ್ರ ಇಚ್ಚಂಗಿ, ಯಲ್ಲಪ್ಪ ಮಾದೇವಪ್ಪನವರ, ಫಕ್ಕಿರೇಶ ಕೋರಿಶೆಟ್ಟಣವರ, ರವಿ ಸಜ್ಜನರ, ಚನ್ನಪ್ಪ ಹಾದಿಮನಿ, ಸಂಜಯ ನಂದೇಣ್ಣವರ, ರಾಘವೇಂದ್ರ ರೆಡ್ಡಿ, ಆನಂದ ಹಿರೇಹೊಳಿ, ಅರುಣ ಅಕ್ಕಿ, ವಿಜಯ ಸಜ್ಜನರ, ಶರತ ಸಜ್ಜನರ, ಪ್ರವೀಣ ಬೊಮ್ಮನಳ್ಳಿ, ಭೀಮರೆಡ್ಡಿ ಅಳವಂಡಿ, ವಿಶ್ವನಾಥ ಹುಬ್ಬಳ್ಳಿ, ಮಲ್ಲೇಶ ಕೊಂಕ್ಕರಗುಂದಿ ಮುಂತಾದವರು ಉಪಸ್ಥಿತರಿದ್ದರು.