ಪುಣ್ಯ ಕ್ಷೇತ್ರಗಳಲ್ಲಿ ಸ್ವಚ್ಛತೆ ಕಾಪಾಡಿ

ರಾಯಚೂರು,ಫೆ.೨೮- ನಮ್ಮ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ,
ಅದರಲ್ಲಿ ಪುಣ್ಯಕ್ಷೇತ್ರಗಳಿಗೆ ಹೋದಾಗ ಸ್ನಾನ ಮಾಡುವ ನದಿ ದಡದಲ್ಲಿ ಸ್ವಚ್ಛತೆ ಕಾಪಾಡಿ ಎಂದು ಸಮಾಜ ಚಿಂತಕರು ಹಾಗೂ ವ್ಯಂಗ್ಯ ಚಿತ್ರಕಾರರಾದ ಈರಣ್ಣ ಬೆಂಗಾಲಿ ಪತ್ರಿಕಾ ಪ್ರಕಟಣೆಯಲ್ಲಿ ಕಳವಳ ವ್ಯಕ್ತ ಪಡಿಸಿದ್ದಾರೆ.
ನಾವೆಲ್ಲ ಯಾವ ಬ್ರಾಂಡ್ ಸೋಪ್, ಶಾಂಪೂ, ಪೇಸ್ಟ್ ಬಳಕೆ ಮಾಡ್ತೀರಾ ಅಂತ ಧರ್ಮಸ್ಥಳ, ಸುಬ್ರಹ್ಮಣ್ಯ, ಮಂತ್ರಾಲಯ, ಅನೇಕ ಪವಿತ್ರ ಕ್ಷೇತ್ರಗಳ ಸ್ನಾನಘಟ್ಟಕ್ಕೆ ಬಂದು ಹೇಳೋದೇನೂ ಬೇಡ. ಪವಿತ್ರ ಸ್ನಾನ ಮಾಡಿಕೊಂಡು ಹೋಗಿ ಸಾಕು. ಸ್ನಾನ ಮಾಡಿ ಹೋಗುವಾಗ ನೀವು ತಂದ ವಸ್ತುವನ್ನು ವಾಪಸ್ ಹಿಡ್ಕೊಂಡು ಹೋಗಿ ಕಸದ ಬುಟ್ಟಿಗೆ ಹಾಕಿ ಸ್ವಚ್ಛತೆ ಕಾಪಾಡಿ ಎಂದರು.
ಕೆಲವರು ಮೂರು ತಿಂಗಳು ಸ್ನಾನನೇ ಮಾಡದವರ ಹಾಗೆ, ವರ್ಷಕ್ಕೆ ಎರಡೇ ಸಲ ಹಲ್ಲುಜ್ಜುವವರ ಹಾಗೆ ಮಾಡ್ತಾರೆ. ಇದನ್ನೆಲ್ಲಾ ಮಾಡೋಕೆ ಮಂಜುನಾಥನ, ಸುಬ್ರಹ್ಮಣ್ಯನ ಸನ್ನಿಧಿಗೆ ಬರಬೇಕಾ? ಮನೆಯ ಬಾತ್ ರೂಮ್ ಇಲ್ವಾ? ಭಕ್ತಿಯ ಹೆಸರಲ್ಲಿ ಶೋಕಿ ಎಲ್ಲಾ ಬೇಕಾ, ಪವಿತ್ರ ಸ್ಥಳದಲ್ಲಿ ಸ್ನಾನ ಮಾಡಿದ ಮೇಲೆ ಹೇಗೆ ಸ್ವಚ್ಛತೆಯಿಂದ ಇರಬೇಕು ಎಂದು ತಿಳಿದುಕೊಳ್ಳಬೇಕು ಎಂದು ಕಿಡಿಕಾರಿದರು.
ಯಾವುದೇ ಪುಣ್ಯ ಕ್ಷೇತ್ರಗಳಿಗೆ ಹೋದಾಗ ಅಲ್ಲಿನ ಸ್ವಚ್ಛತೆ ಕಾಪುಡುದು ನಮ್ಮ ಜವಾಬ್ದಾರಿ, ಆದ್ಯ ಕರ್ತವ್ಯ, ಸ್ವಚ್ಛತೆ ಕಾಪಾಡಲು ಆಗೋದಿಲ್ಲ ಅಂದ್ರೆ ಪುಣ್ಯಕ್ಷೇತ್ರಗಳಿಗೆ ಹೋಗದೆ ಮನೆಯಲ್ಲಿ ಇದ್ರೆ ಆಯ್ತು ಎಂದರು.