ಪುಣ್ಯಾರಾಧನೆ ಕಾರ್ಯಕ್ರಮ


ಲಕ್ಷ್ಮೇಶ್ವರ,ಫೆ.12: ತ್ಯಾಗವೀರ ಶಿರಸಂಗಿ ಲಿಂಗರಾಜರ ಜನ್ಮಭೂಮಿ ಶಿಗ್ಲಿ ಗ್ರಾಮದ ಪ್ರತಿಷ್ಠಿತ ಕೂಡಲ ಮಠ ಮನೆತನದ ಮುರುಗಯ್ಯನವರು ಕೂಡಲಮಠ ಅವರ 28ನೆಯ ಪುಣ್ಯರಾಧನೆ ಗ್ರಾಮದ ಎಸ್ ಎಸ್ ಕೂಡ್ಲುಮಠ ಮಾಧ್ಯಮಿಕ ಶಾಲೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಸೋಮಣ್ಣ ಡಾನ್ಗಲ್ ಅವರು ಮಾತನಾಡಿ ಗ್ರಾಮದಲ್ಲಿ ಇಂದು ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದು 60 ದಶಕಗಳನ್ನು ಕಂಡಿದ್ದರೆ ಅದಕ್ಕೆ ಕೂಡ್ಲು ಮಠ ಮನೆತನದವರ ನಿಸ್ವಾರ್ಥ ತ್ಯಾಗ ಅನುಭವ ದಾನದ ಗುಣ ಧರ್ಮ ಕಾರಣವಾಗಿದೆ.
ಗ್ರಾಮದಲ್ಲಿ ಶಿಕ್ಷಣದ ಮಹತ್ವತೆಯನ್ನು ಅರಿತು ಕೋಟ್ಯಾಂತರ ಬೆಲೆಬಾಳುವ ಭೂಮಿಯನ್ನು ದಾನ ಮಾಡುವ ಮೂಲಕ ಗ್ರಾಮದಲ್ಲಿ ಶಿಕ್ಷಣ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮನ್ನೇ ತಾವು ಸಮರ್ಪಿಸಿಕೊಂಡ ದಾನ ಶೂರ ಮುರುಗಯ್ಯನವರು ಎಂದು ಸೋಮಣ್ಣ ಅವರು ಪ್ರಶಂಶಿಸಿದರು..
ಈ ಸಂದರ್ಭದಲ್ಲಿ ಫಕಿರೇಶ್ ಕಾಳಪ್ಪನವರ ಹನುಮಂತಪ್ಪ ತಳವಾರ ನಿಂಗಪ್ಪ ಹುನಗುಂದ ವೀರಣ್ಣ ಪವಾಡದ ಚನ್ನಬಸಪ್ಪ ಬಾಳಿಕಾಯಿ ನೀಲನಗೌಡ ಪಾಟೀಲ ಭರತ್ ಬಳಿಗಾರ ಮಹಾಂತೇಶ್ ಪಾಟೀಲ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಪ್ರಧಾನ ಗುರುಗಳಾದ ಸಿಎಂ ಮೊಗಲಿ ವೈ ಎಂ ಬಸಾಪುರ ನಿರ್ವಹಿಸಿದರು.