ಪುಣ್ಯಸ್ಮರಣೋತ್ಸವ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)
ಹಾವೇರಿ,ಸೆ7: ನಮ್ಮನ್ನು ನಂಬಿ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಅವರ ಬದುಕು ಹಸನುಗೊಳಿಸಬೇಕು ಎಂದು ಶಿವಾನಂದ ಶಿವಾಚಾರ್ಯರು ಆರ್ಶಿವದಿಸುತ್ತಿದ್ದರು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಪೂಜ್ಯ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ನೆಗಳೂರಿನ ಶ್ರೀಮಠದಲ್ಲಿ ಜರುಗಿದ ಲಿಂ.ಶಿವಾನಂದ ಶಿವಾಚಾರ್ಯರ 16 ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಶಿವಾನಂದ ಶಿವಾಚಾರ್ಯರು ಸರಳತೆಯ ಸಾತ್ವಿಕ ಸ್ವಾಭವದ ಪೂಜ್ಯರಾಗಿದ್ದರು, ಅವರು ನುಡಿದೆದ್ದೆಲ್ಲ ಸತ್ಯವಾಗುತ್ತಿದ್ದವು, ಜೀವನದ್ದಕ್ಕೂ ಕಷ್ಟ ಕಾರ್ಪಣ್ಯಗಳೊಂದಿಗೆ ಬೆಳೆದು ಬಂದ ಶ್ರೀಗಳು ಎಂದಿಗೂ ಆಚಾರ ವಿಚಾರಗಳನ್ನು ಮರೆಯಲಿಲ್ಲ. ಅವುಗಳನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದರು. ಕರ್ನಾಟಕದ ಮೂಲೆ ಮೂಲೆಗೂ ಸಂಚರಿಸಿ ಧರ್ಮ ಸಂಸ್ಕಾರ ಪಸರಿಸುವುದರೊಂದಿಗೆ ನೆಗಳೂರ ಗ್ರಾಮದ ಹೆಸರನ್ನು ನಾಡಿನ ತುಂಬೆಲ್ಲ ಹರಡುವಂತೆ ಮಾಡಿದರು.
ಸಾಮಾಜೀಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇಯಾದ ಸಾಧನೆಗೈದು ಸದ್ಭಕ್ತರ ಶ್ರೇಯಸ್ಸಿಗಾಗಿ ಶ್ರಮಿಸಿ ನೆಗಳೂರ ಹಿರೇಮಠದ ಕೀರ್ತಿ ಎಲ್ಲಡೆ ಪಸರಿಸಲು ಕಾರಣರಾದರು. ಅವರ ಜೀವಾತವಧಿಯಲ್ಲಿ 1 ಲಕ್ಷ ಜನರಿಗೆ ಲಿಂಗ ದೀಕ್ಷಾ ಸಂಸ್ಕಾರ ನೀಡಿದರು. ಗ್ರಾಮ, ಪಟ್ಟಣಗಳಲ್ಲಿ ಪುರಾಣ ಪ್ರವಚನ ಸಾಮೂಹಿಕ ವಿವಾಹ ಪಂಚ ಪೀಠ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಉತ್ಸವ ಜರುಗಿಸಿದರು, ಗುರು ವಿರಕ್ತ ಪರಂಪರೆಯ ಸ್ವಾಮಿಗಳೊಂದಿಗೆ ಸಮನ್ವಯತೆಯನ್ನು ಕಂಡ ಅಪರೂಪದ ಪೂಜ್ಯರು ಶಿವಾನಂದ ಶಿವಾಚಾರ್ಯರು ಅವರು ಇಂದಿಗೂ ಜ್ಯೋತಿ ಸ್ವರೂಪದಲ್ಲಿ ಶ್ರೀಮಠದಲ್ಲಿ ನೆಲಸಿ ನಮಗೆಲ್ಲ ಆಶೀರ್ವದಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಈಶ್ವರ ಶಿಡೇನೂರ, ಶಂಭಣ್ಣ ಕುಪ್ಪೇಲೂರ, ಪರಮೇಶ್ವರಯ್ಯ ಮಠಪತಿ, ವಿರೇಶ ಗಿರಿಯಣ್ಣನವರ, ಶರಣಪ್ಪ ಚಪ್ಪರದ, ಕೊಟ್ರೇಶ ಮಠದ, ವಿರುಪಾಕ್ಷಗೌಡ ಹರಕಂಗಿ, ಸಣ್ಣಬಸನಗೌಡ ಸುಕುಳಿ, ಮುದ್ದೇಪ್ಪ ಕರಡಿ, ಶಿವಾನಂದ ಹಡಪದ, ಶರಣಪ್ಪ ಹುಂಬಿ, ನೀಲಮ್ಮ ಮೈದೂರ, ನೀಲಮ್ಮ ಅಂಗಡಿ, ಶಾರದಾ ಹಿರೇಮಠ, ಭಾರತಿ ಹಿರೇಮಠ ಸೇರಿದಂತೆ ಶ್ರೀಮಠದ ವಿದ್ಯಾರ್ಥಿಗಳು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾಧಿಗಳು ಇದ್ದರು.
ನಂತರ ಅನ್ನಸಂರ್ತಪಣೆ ಜರುಗಿತು. ಇದಕ್ಕೂ ಪೂರ್ವದಲ್ಲಿ ಬೆಳಗಿನ ಜಾವ ಉಭಯ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಮಂಗಳಾರುತಿ ಪೂಜಾ ಕೈಂಕರ್ಯಗಳನ್ನು ಶ್ರೀಗಳು ನೇರವೇರಿಸಿದರು. ಗುರುಶಾಂತ ಹಿರೇಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.