ಪುಣ್ಯಭೂಮಿಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ

ಭಾಲ್ಕಿ:ಜೂ.9: ಪಟ್ಟಣದಲ್ಲಿರುವ ಸ್ಮಶಾನ ಭೂಮಿಗಳಿಗೆ ಸಕಲ ಮೂಲಭೂತ ಸೌಲಭ್ಯಗೆ ಆಗ್ರಹಿಸಿ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ ಅವರಿಗೆ ರೋಟರಿ ಕ್ಲಬ್ ಅಧ್ಯಕ್ಷ ಡಾ.ಯುವರಾಜ ಜಾಧವ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ಎಲ್ಲ ಸಮುದಾಯದ ರುದ್ರಭೂಮಿಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಇಲ್ಲದಿರುವುದರಿಂದ ಶವ ಸಂಸ್ಕಾರ ಮಾಡುವವರಿಗೆ ತೊಂದರೆ ಅನುಭವಿಸಬೇಕಾಗಿದೆ.ಕಾರಣ ಪುರಸಭೆಯವರು ತಕ್ಷಣ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ,ರುದ್ರ ಭೂಮಿಗೆ ರಸ್ತೆ,ಬೀದಿದೀಪ,ಮೇಲ್ಛಾವಣಿ,ನೀರಿನ ವ್ಯವಸ್ಥೆ ಮತ್ತು ಆಸನ ವ್ಯವಸ್ಥೆ ಶೀಘ್ರದಲ್ಲಿಯೇ ಒದಗಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ರೋಟರಿ ಕೋಶಾಧ್ಯಕ್ಷ ಡಾ.ವಸಂತ ಪವಾರ,ಕಾರ್ಯದರ್ಶಿ ನ್ಯಾಯವಾದಿ ಸಾಗರ ನಾಯಕ,ರೋಟರಿಯನರಾದ ಯೋಗೇಶ ಅಷ್ಟೂರೆ,ಉಮಾಕಾಂತ ವಾರದ ಇದ್ದರು.