ಪುಣ್ಯಫಲ ಸಂಪಾದನೆಗೆ ಪ್ರಸ್ತುತ ಸೂಕ್ತ ಕಾಲ: ನವೀನ್ ಕುಮಾರ್

ಮೈಸೂರು. ಜೂ.2: ಜನರು ಪುಣ್ಯಫಲ ಸಂಪಾದನೆಗೆ ಪ್ರಸ್ತುತ ಸೂಕ್ತ ಕಾಲ ಎಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಂ ಎನ್ ನವೀನ್ ಕುಮಾರ್ ತಿಳಿಸಿದರು.
ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲಾ ವರ್ಗದ ಜನರು ಸಹಾಯಕ್ಕೆ ಧಾವಿಸುವುದು ಸಹಕಾರ ಹಸ್ತ ನೀಡುವುದು ನಿಜವಾದ ದಾನ ಎನಿಸಿಕೊಳ್ಳುತ್ತದೆ ಪುಣ್ಯ ಫಲ ಸಂಪಾದನೆಗೆ ಇದು ಸೂಕ್ತ ಸಮಯ ಇದ್ದವರು ಇಲ್ಲದವರು ಅವಶ್ಯಕತೆ ಪೂರೈಸಲು ಮುಂದಾಗಿ ಎಂದು ಎಂ.ಎನ್ ನವೀನ್ ಕುಮಾರ್ ಮನವಿ ಮಾಡಿದರು.
ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಮೈಸೂರಿನ 23ನೇ ವಾರ್ಡಿನ ಡಿ. ಸುಬ್ಬಯ್ಯ ರಸ್ತೆಯಲ್ಲಿರುವ ಗೋಪಾಲಕರಿಗೆ ಬಿಜೆಪಿ ಮುಖಂಡರು ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎಂ.ಎನ್ ನವೀನ್ ಕುಮಾರ್ ರವರು ಆಹಾರ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು ಕೂರೂನಾ ಭೀಕರ ಅಲೆಯಲ್ಲಿಯೂ ಇಂದು ಎಲ್ಲರೂ ಜೀವನ ನಡೆಸಲು ಸಾಧ್ಯವಾಗುತ್ತಿರುವುದು ಮಾನವನಲ್ಲಿನ ಮಾನವೀಯತೆ ಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಅಮಿತ್ ದೇವರಹಟ್ಟಿ, ವಿಶ್ವನಾಥ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎಂ.ಎನ್ ನವೀನ್ ಕುಮಾರ್, ಮೇಲ್ಕೋಟೆ ಆಳ್ವಾರ್ ಸ್ವಾಮೀಜಿ ಕಾಂತಿಲಾಲ್, ಪ್ರಮೋದ್, ಮಂಜುನಾಥ್, ರವಿಕುಮಾರ್, ಇನ್ನತರರು ಉಪಸ್ಥಿತರಿದ್ದರು.