ಪುಣ್ಯಪ್ರಾಪ್ತಿಗೆ ಪರಮಾತ್ಮನ ಸ್ಮರಣೆ ಮಾಡುವದು ಅಗತ್ಯ: ಹಾಸಿಂಪೀರ ವಾಲೀಕಾರ

ವಿಜಯಪುರ, ಮಾ.15-ಪರಮಾತ್ಮನ ಜ್ಞಾನ ಸ್ಮರಣೆ ಮಾಡುವದರಿಂದ ಪುಣ್ಯ ಪಡೆಯಲು ಸಾಧ್ಯ ಎಂದು ಶೂನ್ಯಪೀಠ ಪ್ರಶಸ್ತಿಯ ಪುರಸೃತ ಹಾಸಿಂಪೀರ ವಾಲೀಕಾರ ಹೇಳಿದರು.
ತಿಗಣಿ ಬಿದರಿ ಗ್ರಾಮದಲ್ಲಿ ಡಾ-ಅಂಬೇಡಕರ ಯವಕ ಸಂಘದ ಆಶ್ರಯದಲ್ಲಿ ಶಿವರಾತ್ರಿ ಕುರಿತ ಚಿಂತನಾ ಗೋಷ್ಠಿ ಗ್ರಾಮದ ಬಸವ ಮಂದಿರದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಾವು ಯಾರು ಶಾಶ್ವತವಾಗಿ ಈ ಭೂಮಿಯ ಮೇಲೆ ಬಹಳ ದಿನ ಇರುವದಿಲ್ಲ. ಈ ಭೂಮಿ ಒಂದು ದಿನ ನಮ್ಮ ಮೇಲಿರುತ್ತದೆ ಈ ಸತ್ಯ ಅರಿತುಕೊಂಡು ಬದುಕಬೇಕು. ಈ ಸೃಷ್ಟಿಯನ್ನು ಸೃಷ್ಟಿಸಿದ ಸೃಷ್ಟಿ ಕರ್ತೃ ನಮಗೆಲ್ಲವನ್ನು ನೀಡಿದ್ದಾನೆ. ನೀರಾಕಾರ ಪರಮಾತ್ಮಾ ನಮ್ಮ ಎಲ್ಲ ಕರ್ಮಗಳನ್ನು ಆಲಿಸುತ್ತಾನೆ ಎಂದರು
ಬಬಲೇಶ್ವರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೆÇ್ರೀ ಮಹಾದೇವ ರೇಬಿನಾಳ ಮಾತನಾಡಿ ಭಕ್ತಿ. ಶ್ರದ್ದೆಯಿಂದ ದೇವರನ್ನು ಪ್ರಾರ್ಥಿಸಬೇಕು. ಶಿವರಾತ್ರಿ ಭಾರತೀಯ ಸಂಸ್ಕøತಿಯ ಪ್ರತೀಕ. ಹನ್ನೆರಡು ಜೋತಿರ್‍ಲಿಂಗಗಳು ಭಕ್ತಿಯ ಕೇಂದ್ರಗಳಾಗಿವೆ ಎಂದರು
ಸಮಾಜ ಸೇವಕ ಅರ್ಜುನಗೌಡ ದೇವಕ್ಕಿ ಮಾತನಾಡಿದರು. ಖಾಜಾ ಪಟೇಲ್, ರಮೇಶ ಚಲವಾದಿ, ಬಾಬು ದಳವಾಯಿ, ಹಣಮಂತ ದೇವಕ್ಕಿ, ಜ್ಯೋತಿಬಾ ಅಮಲಿ, ಶ್ರೀಶೈಲ ಮಾಳಿ, ಯಲ್ಲಪ್ಪ ಬಿದರಕರ, ಮಹಿಬೂಬ ಮುಲ್ಲಾ, ಮಹಾದೇವ ಹರಿಜನ, ಯಮನಪ್ಪ ಹರಿಜನ, ದೇವೇಂದ್ರ ಬೀದರಕರ, ಚಂದ್ರಪ್ಪ ಕಾಂಬಳೆ, ಚಂದಪ್ಫ ಹರಿಜನ, ಗಂಗಪ್ಪಾ ಕಾಂಬಳೆ, ರೇಣುಕಾ ಕಾಂಬಳೆ, ಕಸ್ತೂರಿ ಹರಿಜನ, ಸುನಂದಾ ಛಲುವಾದಿ ಹಾಗೂ ಮಹಾನಂದಾ ಕಾಂಬಳೆ ಉಪಸ್ಥಿತರಿದ್ದರು.