ಪುಣಭಘಟ್ಟ ಗ್ರಾ.ಪಂಗೆ ಅವಿರೋಧ ಆಯ್ಕೆ

ಹರಪನಹಳ್ಳಿ.ನ.೧೭: ತಾಲ್ಲೂಕಿನ ಪುಣಭಘಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಕೆ. ನಂದಿನಿ ನಾರನಗೌಡ, ಉಪಾಧ್ಯಕ್ಷರಾಗಿ ಗೌಡ್ರ ದಾನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಹಿಂದೆ ಅಧ್ಯಕ್ಷೆಯಾಗಿದ್ದ ಜಿ. ನಾಗರತ್ನ, ಉಪಾಧ್ಯಕ್ಷ ಜಿ. ನಾಗರಾಜ ಅವರ ರಾಜೀನಾಮೆಯಿಂದ ತೆರುವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು.ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಕೆ. ನಂದಿನಿ ನಾರನಗೌಡ, ಗೌಡ್ರ ದಾನಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದು, ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ತಿಳಿಸಿದರು.ಪುಣಭಘಟ್ಟ ಗ್ರಾಮ ಪಂಚಾಯತಿ 18 ಜನ ಸದಸ್ಯರ ಬಲವನ್ನು ಹೊಂದಿದೆ. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ವಿರುದ್ಧ ಈಚೆಗೆ ಸದಸ್ಯ ಎ.ಕೆ. ಜಯಪ್ಪ, ಕೆ.ನಾಗರಾಜ, ಜ್ಯೋತಿನಾಯ್ಕ, ಶ್ರೀನಿವಾಸ್, ರಾಮಪ್ಪ, ಮೀನಾಕ್ಷಿಬಾಯಿ, ಪವಿತ್ರ, ಪಾರ್ವತಿ ಬಾಯಿ, ಪುಷ್ಪಾವತಿ ಸೇರಿದಂತೆ 12 ಸದಸ್ಯರು ಅವಿಶ್ವಾಸದ ಮತ ಚಲಾಯಿಸಿದ್ದರು. ಉಳಿದ 6 ಜನ ಸದಸ್ಯರು ಪರವಾಗಿ ತಟಸ್ಥವಾಗಿ ಉಳಿದಿದ್ದರು. ಅವಿಶ್ವಾಸ ನಿರ್ಣಯಕ್ಕೆ ಜಯ ಒಲಿದಿದೆ.ಮುಖಂಡರಾದ ನಂದಿಕAಬ ಚಂದ್ರನಾಯ್ಕ, ಮುರುಗೇಶಪ್ಪ, ಬಾಲಚಂದ್ರಯ್ಯ, ಫಣಿಯಾಪುರ ಲಿಂಗರಾಜ, ನಾರಪ್ಪ, ಡಿ.ಸಿದ್ದಪ್ಪ, ಬಾಲೆನಹಳ್ಳಿ ಕೆಂಚನಗೌಡ, ಇದ್ದರು.