ಪುಡಿಪುಡಿಯಾದ ರಥದ ಚಕ್ರ

ಪೇಚಾಟಕ್ಕೆ ಸಿಲುಕಿದ ಅಧಿಕಾರಿಗಳು: ಭಕ್ತಾದಿಗಳಿಂದ ಧಿಕ್ಕಾರ
ನಂಜನಗೂಡು: ಮಾ.26:ದಕ್ಷಿಣ ಕಾಶಿ ನಂಜನಗೂಡಿನ ದೊಡ್ಡ ಜಾತ್ರೆಯಲ್ಲಿಂದು ಅಪಶಕುನ ಎದುರಾಗಿದೆ. ಬೆಳಗ್ಗೆ ಎಂದಿನಂತೆ ರಥಗಳನ್ನು ಸಿಂಗರಿಸಲಾಯಿತು ಭಕ್ತಾದಿಗಳು ಬಹಳ ಉತ್ಸಾಹದಿಂದ ಬಂದಿದ್ದರು ಆದರೆ ಅಮ್ಮನವರ ರಥ ಎಳೆಯಲು ಮುಂದಾದಾಗ ರಥವು 50 ಮೀಟರ್ ಮುಂದೆ ಬಂದಾಗ ರಥದ ಎಡಭಾಗದ ಚಕ್ರದ ಮರವು ಪುಡಿಪುಡಿಯಾಗಿ ಉದುರಿ ಬಿದ್ದ ಕಾರಣ ಸ್ಥಳದಲ್ಲೇ ರಥ ನಿಂತುಹೋಯಿತು.
ಇದನ್ನು ಕಂಡ ಭಕ್ತಾದಿಗಳು ದೇವಸ್ಥಾನದ ಇಂಜಿನಿಯರ್ ಮತ್ತು ಅಧಿಕಾರಿಗಳಿಗೆ ದಿಕ್ಕಾರ ಹಾಕಿ ಚೀಮಾರಿ ಹಾಕಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ತಬ್ಬಿಬ್ಬಾದರು ತಕ್ಷಣ ಪುರೋಹಿತರು ರಥದಿಂದ ದೇವರನ್ನು ಇಳಿಸಿ ಪುನಹ ಚಿಕ್ಕ ತೇರಿನಲ್ಲಿ ಅಮ್ಮನವರನ್ನು ಕೂರಿಸಿ ರಥದ ಬೀದಿಯಲ್ಲಿ ರಥವನ್ನು ಎಳೆದರು.
ಭಕ್ತಾದಿಗಳು ಅಧಿಕಾರಿಗಳಿಗೆ ಛೀಮಾರಿ ಹಾಕುತ್ತಾ ನಿಮಗೇನ್ರಿ ಕೆಲಸ ವರ್ಷಕ್ಕೆ ಒಂದು ಬಾರಿ ನಡೆಯುವ ರಥೋತ್ಸವವನ್ನು ಆಚರಿಸಲು ನಿಮಗೆ ಏನು ಬಂದಿದೆ. ಜಾತ್ರೆ ಸಮಯದಲ್ಲಿ ಪ್ರತಿಯೊಂದು ರಥವನ್ನು ಮುಂಜಾಗೃತಾ ಕ್ರಮವಾಗಿ ರಥಗಳನ್ನು ಪರಿಶೀಲಿಸ ಬೇಕಾಯಿತು ಕಚೇರಿಯಲ್ಲಿ ನೀವು ಕುಳಿತುಕೊಂಡು ಜಾತ್ರೆಯ ಸಮಯದಲ್ಲಿ ಕೂಡ ಹೊರಬರದೆ ನಮ್ಮ ಊರಿಗೆ ಕೆಟ್ಟ ಹೆಸರು ತರುತ್ತಿದ್ದೀರಿ.
ಆದಾಯದಲ್ಲಿ ನಮ್ಮ ದೇವಸ್ಥಾನದಲ್ಲಿ ಕಡಿಮೆ ಇಲ್ಲ ರಥಗಳಿಗೆ ಸೂಕ್ತ ಬಂದೋಬಸ್ತ್ ಮಾಡಿ ಮುಂಜಾಗ್ರತೆ ವಹಿಸಬೇಕು ಮಳೆ ಬಿಸಿಲಿನಿಂದ ವರ್ಷಪೂರ್ತಿ ರಥಗಳು ನೆನೆದು ಈ ಸ್ಥಿತಿಗೆ ಬಂದಿವೆ ಮುಂದಾದರೂ ಇಂತಹ ಕೆಲಸ ಮಾಡದೆ ಇರುವಂತೆ ಸಲಹೆ ನೀಡಿದ ಜನತೆ ಕಣ್ಣು ಮುಚ್ಚಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಮ್ಮ ಊರಿಗೆ ಕಳಂಕ ತರುವ ಅಧಿಕಾರಿಗಳು ಇರಬಾರದು ಎಂದು ದೇವಸ್ಥಾನದ ಇಂಜಿನಿಯರ್ ಅಧಿಕಾರಿಗಳಿಗೆ ಚೀಮಾರಿ ಹಾಕಿದರು. ಮುಂದಾದಾಗ ಅಧಿಕಾರಿಗಳು ವರುಷಕ್ಕೆ ಒಂದು ಸಾರಿ ನಡೆಯುವ ಜಾತ್ರೆಗಳನ್ನು ಮುಂಜಾಗ್ರತೆ ವಹಿಸಿ ಜಾತ್ರೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
2019 ರಲ್ಲಿಯೂ ರಥ ಎಳೆಯುವುದಕ್ಕೆ ಬಳಸುವ ಬೃಹತ್ ಗಾತ್ರದ ಹಗ್ಗ ಸುಮಾರು 14 ಬಾರಿ ಕಟ್ಟಾಗಿತ್ತು. ಇದೀಗ ಪಾರ್ವತಮ್ಮನವರ ರಥೋತ್ಸವದ ಚಕ್ರ ಪುಡಿ ಪುಡಿಯಾಗಿದ್ದು ಭಕ್ತರಲ್ಲಿ ಆತಂಕ ಹೆಚ್ಚಾಗಿದೆ. ಇದು ಯಾರ ನಿರ್ಲಕ್ಷ್ಯ ಎಂದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಎದ್ದಿದೆ.