ಪುಟ್‌ವೇರ್ ಅಂಗಡಿ ಮೇಲೆ ಅಬಕಾರಿ ಪೊಲೀಸರ ದಾಳಿ

ಹೊಸನಗರ.ಜೂ.೫; ತಾಲೂಕಿನ ಸಂಪೆಕಟ್ಟೆ ಗ್ರಾಮದ ರಂಜಿತ್ ಪುಟ್‌ವೇರ್ ಅಂಗಡಿ ಮೇಲೆ ಅಬಕಾರಿ ಇಲಾಖೆ ಸಿಬ್ಬಂದಿಗಳು ದಾಲಿ ನೆಡೆಸಿ ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.ರಾಮಚಂದ್ರ   ಎಂಬುವವರಿಗೆ ಸೇರಿದ ಈ ಪಾದರಕ್ಷೆ ಅಂಗಡಿಯಲ್ಲಿ ರೂ 12 ಸಾವಿರ ಮೌಲ್ಯದ 27.9 ಲೀಟರ್ ಭಾರತೀಯ ತಯಾರಿಕ ಮದ್ಯ ವಶ ಪಡಿಸಿಕೊಂಡಿದ್ದಾರೆ. ಆರೋಪಿ ರಾಮಚಂದ್ರ ಪರಾರಿ ಆಗಿದ್ದು, ಆತನ ವಿರುದ್ದ ಹೊಸನಗರ ಅಬಕಾರಿ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ಸೂಚನೆ ಮೇರೆಗೆ, ತೀರ್ಥಹಳ್ಳಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಸಂತೋಷ್ ಕುಮಾರ್ ಎಲ್. ತಿಪ್ಪಣ್ಣನವರ್ ಮಾರ್ಗದರ್ಶನದಲ್ಲಿ, ಅಬಕಾರಿ ನಿರೀಕ್ಷಕ ಸೈಯದ್ ತಪ್ ಜಿಲ್ ಉಲ್ಲಾ ನೇತೃತ್ವದಲ್ಲಿ ಕಾನ್‌ಸ್ಟೇಬಲ್ ಜಿ.ಎಸ್. ನಾಗರಾಜ್, ಪಾಂಡು ಅಂಬವ್ವಗೋಳ, ಚಾಲಕ ಉಮೇಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.