ಪುಟ್‌ಪಾತ್ ಒತ್ತುವರಿ ಸಿಎಂಸಿ ಸದಸ್ಯರಿಂದ ದೂರು

ಕೆಜಿಎಫ್:ಆ:೧೮:ನಗರದ ಆಶೋಕನಗರ ಮುಖ್ಯ ರಸ್ತೆಯ ಪಕ್ಕದಲ್ಲೇ ಮಾಡಲಾಗುತ್ತಿರುವ ಲೇಔಟ್ ಮಾಲಿಕರು ರಸ್ತೆ ಪಕ್ಕದಲ್ಲಿ ಇರಬೇಕಾದ ಪುಟ್‌ನನ್ನು ಅತಿಕ್ರಮಿಸಿಕೊಂಡು ಕಲ್ಲುಗಳನ್ನು ನಡುತ್ತಿರುವುದರ ವಿರುದ್ಧ ನಗರಸಭೆ ಸದಸ್ಯೆ ಜೀವನತೀಯ ರಾಜೇಶ್ ಹಾಗೂ ಸ್ಥಳೀಯ ನಿವಾಸಿಗಳು ನಗರಸಭೆ ಲೋಕೋಪಯೋಗಿ ಕಂದಾಯ ಅಧಿಕಾರಿಗಳಿಗೆ ಪುಟ್ ಪಾತ್ ಅತಿಕ್ರಮಿಸಿ ಕಾಂಪೌಂಡ್ ಹಾಕಲಾಗುತ್ತಿದೆ ಎಂದು ದೂರು ನೀಡಿದ್ದರು .
ನಗರಸಭೆ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವ ವೇಳೆ ಇದು ರೆವೆನ್ಯೂ ಜಮೀನು ಆಗಿರುವುದರಿಂದ ನಮ್ಮಲ್ಲಿ ಎಲ್ಲಾ ದಾಖಲೆ ಇದೆ ಎಂದು ಲೇಔಟ್ ಮಾಲಿಕ ಸ್ಪಷ್ಟನೆ ನೀಡಿದರು ಆಶೋಕನಗರ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸಂಭಂದಪಟ್ಟ ರಸ್ತೆಯಾಗಿರುವುದರಿಂದ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡಿದ್ದರ ಮೇರೆಗೆ ಲೋಕೋಪಯೋಗಿ ಇಲಾಖೆ ಎಇಇ ರವಿ ಹಾಗೂ ಜೆಇ ರಾಜಶೇಖರ್ ಸ್ಥಳಕ್ಕೆ ಆಗಮಿಸಿ ಆಶೋಕನಗರ ರಸ್ತೆಯು ದ್ವಿಪಥ ರಸ್ತೆಯಾಗಿದ್ದು ರಸ್ತೆಯ ಎರಡು ಭಾಗಗಳಲ್ಲಿ ೧೨.೫ ಮೀಟರ್ ರಸ್ತೆ ಇರಬೇಕಿದ್ದು ರಸ್ತೆ ಪಕ್ಕದಲ್ಲಿ ಡ್ರನೈಜ್ ಹಾಗೂ ಪುಟ್‌ಪಾತ್ ಇರಬೇಕಿದ್ದು ರಸ್ತೆ ಮಾರ್ಜಿನ್ ಬಿಟ್ಟು ನೀವು ಕಾಂಪೌಂಡ್ ಗೋಡೆ ಹಾಕಬೇಕು ರಸ್ತೆ ಪಕ್ಕದಲ್ಲಿ ನಡೆದಾಡಲು ಸಹ ಸ್ಥಳವಿಲ್ಲದಂತೆ ಒತ್ತುವರಿ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ತಾಕೀತು ಮಾಡಿದರು .
ಇದೇ ವೇಳೆ ಮಾತನಾಡಿ ನಗರಸಭೆ ಸದಸ್ಯೆ ಜೀವನತೀಯರಾಜೇಶ್ ಸರ್ವೆ ನಂಬರ್ ೫೮ ರಲ್ಲಿ ಕರೆ ಇದ್ದು ಕೆರೆಯನ್ನು ಸಹ ಒತ್ತುವರಿ ಮಾಡಿಕೊಳ್ಳಲಾಗಿದ್ದು ಕಂದಾಯ ಅಧಿಕಾರಿಗಳು ಸರ್ವೆ ನಡೆಸುವ ಮೂಲಕ ಕೆರೆಯನ್ನು ಉಳಿಸಿಕೊಡಬೇಕಾಗಿ ಮನವಿ ಮಾಡಿ ಖಾಸಗಿ ವ್ಯಕ್ತಿಗಳ ಜಾಗ ಸಾರ್ವಜನಿಕರಿಗೆ ಅವಶ್ಯಕತೆ ಇಲ್ಲ ಆದರೆ ನಾಗರೀಕರು ರಸ್ತೆ ಪಕ್ಕದಲ್ಲಿರುವ ಪುಟ್ ಪಾತ್‌ನಲ್ಲಿ ಒಡಾಟ ನಡೆಸಲು ಮತ್ತು ಮಳೆಗಾಲದಲ್ಲಿ ಮಳೆ ನೀರು ಸರಗವಾಗಿ ಹರಿಯುವಂತೆ ಡ್ರನೈಜ್ ವ್ಯವಸ್ಥೆ ಅಗತ್ಯವಾಗಿದ್ದು ಪಾದಚಾರಿಗಳು ನಡೆದಾಡಲು ಸ್ಥಳವಿಲ್ಲದಿದ್ದರೆ ನಾಗರೀಕರು ರಸ್ತೆಯಲ್ಲಿ ನಡೆಯಬೇಕಾಗುತ್ತದೆ ಆಗ ಅಪಘಾತಗಳು ಉಂಟಾಗಿ ಜೀವಹೊದರೆ ಯಾರು ಜಾವದ್ಬಾರರು ಎಂದು ಪ್ರಶ್ನೆ ಮಾಡಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಆನಂದಕೃಷ್ಣನ್ ಹಾಗೂ ಮಣಿಕಂಠನ್ ಹಾಜರಿದ್ದರು.