ಪುಟ್ಟ ಬಾಲಕನ ಪ್ರಶ್ನೆ ಕೇಳಿ ಬೆರಗಾದ ಬಿಗ್ ಬಿ…

ಮುಂಬೈ, ಜು ೨೦-ಜಾಹೀರಾತು ಚಿತ್ರೀಕರಣವೊಂದರಲ್ಲಿ ೫ ವರ್ಷದ ಪುಟ್ಟ ಬಾಲಕನೊಬ್ಬ ಕೇಳಿದ ಪ್ರಶ್ನೆಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಬೆರಗಾಗಿ ಹೋಗಿದ್ದಾರೆ.

ತನ್ನ ಇತ್ತೀಚಿನ ಬ್ಲಾಗ್‌ನಲ್ಲಿ, ಐದು ವರ್ಷದ ಮಗು ಒಮ್ಮೆ ಅವರನ್ನು ಹೇಗೆ ಮೂಕನನ್ನಾಗಿ ಮಾಡಿತು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ
ಹೌದು ಅಮಿತಾಬ್ ಬಚ್ಚನ್ ಅವರು ಆಗಾಗ ತಮ್ಮ ಬ್ಲಾಗ್ ನಲ್ಲಿ ಹಲವು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಅಭಿಮಾನಿಗಳ ಮನಕ್ಕೆ ಯಾವಾಗಲೂ ಹತ್ತಿರವಾಗಲು ಬಯಸುತ್ತಾರೆ. ಅದೇ ರೀತಿ ಇತ್ತೀಚೆಗೆ ತಮ್ಮ ವೈಯಕ್ತಿಕ ಬ್ಲಾಗ್ ನಲ್ಲಿ ೫ ವರ್ಷದ ಮಗು ತಮ್ಮ ಜೊತೆ ನಡೆಸಿದ ಸಂಭಾಷಣೆಯ ಕುತೂಹಲಕಾರಿ ಅಂಶವೊಂದನ್ನು ಹಂಚಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಜಾಹೀರಾತುವೊಂದಕ್ಕೆ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾಗ ಆಗ ೫ ವರ್ಷದ ಪುಟ್ಟ ಬಾಲಕ ಅವರ ಬಳಿ ಬಂದು ನಿಮ್ಮ ವಯಸ್ಸೆಷ್ಟು ಎಂದು ಕೇಳಿದನಂತೆ. ಅದಕ್ಕವರು ೮೦ ಎಂದಾಗ ನೀವ್ಯಾಕೆ ಇನ್ನೂ ಕೆಲಸ ಮಾಡುತ್ತಿದ್ದೀರಿ, ಮನೆಯಲ್ಲಿ ಆರಾಮಾಗಿ ಸಮಯ ಕಳೆಯಬೇಕಲ್ಲವೇ, ನನ್ನ ಅಜ್ಜ-ಅಜ್ಜಿ ಮನೆಯಲ್ಲಿ ಆರಾಮಾಗಿರುತ್ತಾರೆ, ನೀವು ಕೂಡ ಹಾಗಿರಬೇಕು ಎಂದು ಹೇಳಿದನಂತೆ.ಆತನ ಮಾತು ಕೇಳಿ ಬೆರಗಾಯಿತು ಎಂದು ತಮ್ಮ ಬ್ಲಾಗ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಆತನಿಗೆ ಪ್ರತಿಕ್ರಿಯಲು ನನ್ನಲ್ಲಿ ಉತ್ತರವಿರಲಿಲ್ಲ, ೫ ವರ್ಷದ ಪುಟ್ಟ ಮಗುವಿನ ಬಾಯಲ್ಲಿ ಇಂಥ ಮಾತು ಕೇಳಿ ಅಚ್ಚರಿಯಾಯಿತು,. ಕೊನೆಗೆ ಶೂಟಿಂಗ್ ಮುಗಿದ ಮೇಲೆ ಆತನ ಜೊತೆ ಫೋಟೋ ತೆಗೆದುಕೊಂಡು ಆಟೋಗ್ರಾಫ್ ಕೊಟ್ಟು ಅವನಿಗೆ ವಿದಾಯ ಹೇಳಿ ಬಂದೆ. ಆದರೆ ಆ ಪುಟ್ಟ ಮಗು ಆಡಿದ ಮಾತು ಇಂದಿನ ಡಿಜಿಟಲ್ ಅರ್ಥಕೋಶದ ಕಾಲದಲ್ಲಿ ನನ್ನನ್ನು ಇನ್ನೂ ಗುನುಗುಡುತ್ತಲೇ ಇದೆ ಎಂದು ಬಿಗ್‌ಬಿ ಹೇಳಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಸದ್ಯದಲ್ಲಿಯೇ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಶೂಟಿಂಗ್ ನಲ್ಲಿ ಬ್ಯುಸಿಯಾಗಲಿದ್ದಾರೆ. ಆಯಾನ್ ಮುಖರ್ಜಿಯವರ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸಿದ್ದು ಅದು ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ವಿಕಾಸ್ ಬಹ್ಲ್ ಅವರ ’ಗುಡ್ ಬೈ’ ನ ಭಾಗವಾಗಿದ್ದಾರೆ, ಇದರಲ್ಲಿ ಅವರು ಭಾಸ್ಕರ್ ಪ್ರಜಾಪತಿ ಪಾತ್ರವನ್ನು ನಿರ್ವಹಿಸಲಿದ್ದಾರೆ.