ಪುಟ್ಟರಾಜ ಸ್ಮರಣಾರ್ಥವಾಗಿ ಸಂಗೀತ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.22: ಶ್ರೀಪಂಡಿತ್ ಪುಟ್ಟರಾಜ ಗವಾಯಿಗಳು ಒಬ್ಬ ಮಹಾನ್ ಚೇತನ ಅವರನ್ನು ನಿತ್ಯ ಸ್ಮರಿಸುತ್ತ ಆರಾಧಿಸುವುದು ನಮ್ಮ ನಿಮ್ಮೆಲ್ಲರ ಮಹಾಭಾಗ್ಯ ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ ಸ್ವಾಮಿ ಹೇಳಿದರು.
ನಗರದ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಸಿರಿ ಸಾಂಸ್ಕೃತಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳ ಸ್ಮರಣಾರ್ಥವಾಗಿ ಗುರು ಕರುಣ ಸ್ಮರಣೆ.   ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ ಅಂತಹ ಚೇತನವನ್ನು ಸಿರಿ ಸಾಂಸ್ಕೃತಿಕ ಸಂಸ್ಥೆಯ ಸಂಗೀತ ಪಾಠಶಾಲೆಯು ಸಂಗೀತ ಕಲಿಸುತ್ತಾ ಸ್ಮರಣೋತ್ಸವ ನಡೆಸಿಕೊಂಡು ಬರುವುದರ ಜೊತೆಗೆ ಸಂಗೀತ ಕಲಾವಿದರನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಕ.ಸಾ.ಪ. ತಾ.ಅಧ್ಯಕ್ಷ ಮತ್ತು ವೈದ್ಯ ಡಾ.ಮಧುಸೂದನ್ ಕಾರಿಗನೂರ್ ಮಾತನಾಡಿ  ಸಂಗೀತ ಕಲಾವಿದರಿಗೆ ವೇದಿಕೆ ಕಾರ್ಯಕ್ರಮಗಳು ನೀಡುವ ಮೂಲಕ ಪ್ರೋತ್ಸಾಹಿಸಿ ಸಹಕಾರ ನೀಡಿದಲ್ಲಿ ಕಲೆಯು ಬೆಳೆಯುತ್ತದೆ, ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಸಂಗೀತ ಕಲಿಸಬೇಕು, ಇದರಿಂದ ಮಕ್ಕಳ ಸೃಜನ ಶೀಲತೆ ಹೆಚ್ಚಾಗುತ್ತದೆ ಎಂದರು.
ಹಿರಿಯ ವಕೀಲ ಹೆಚ್.ಕೆ.ಮಲ್ಲಿಕಾರ್ಜನಸ್ವಾಮಿ, ಗಮಕ ಕಲಾವಿದ ಕೆ.ವೆಂಕಟರೆಡ್ಡಿ, ರಂಗಕರ್ಮಿ ಕವಿ ದೊಡ್ಡ ರಾಮರೆಡ್ಡಿ, ಸಂಸ್ಥೆಯ ಅಧ್ಯಕ್ಷ ಗೋಪಾಲ ರೆಡ್ಡಿ ಮಾತನಾಡಿದರು.
ನಂತರ ಸಂಗೀತ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಸಂಗೀತ ಶಿಕ್ಷಕ ಎಂ.ಎಂ. ಶಾಂತಯ್ಯ ಅವರು ಯಮನ್ ರಾಗ ಪ್ರಸ್ತುತಪಡಿಸಿದರು .
ಸುಗಮಸಂಗೀತದಲ್ಲಿ ಎಂ. ವಿಶ್ವಾಸ್ ಅವರು ಹಳೆಯ ಹಾಡುಗಳನ್ನು ಹಾಡಿದರು. ಹಾರ್ಮೋನಿಯಮ್ ಜಿ.ಮಲ್ಲಯ್ಯ, ತಬಲಾ ಹರ್ಷತ್ ಕುಮಾರ್ ಸಾತ್ ನೀಡಿದರು.  ಸಂಗೀತ ಪಾಠ ಶಾಲೆ ವಿದ್ಯಾರ್ಥಿಗಳಿಂದ ಮತ್ತು ತಂಡದಿಂದ ಪುಟ್ಟರಾಜ ಗವಾಯಿಗಳ ಭಕ್ತಿ ಗೀತೆಗಳು ಮತ್ತು ಭಾವಗೀತೆಗಳನ್ನು ಹಾಡಿದರು

Attachments area