ಪುಟ್ಟರಾಜ ಸಾಹಿತ್ಯ ಪ್ರಚಾರ ಅಭಿಯಾನ ಚಾಲನಾ ಸಮಾರಂಭ

ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೨: ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸಾಹಿತ್ಯ ಅದು ನಿಜವಾಗಿಯೂ ಲಿಂಗ ಸಾಹಿತ್ಯ. ಮನದ ಕಾಳಿಕೆ ತೊಳೆಯುವ ಪವಿತ್ರ ಜ್ಞಾನಗಂಗೆ. ಪೂಜ್ಯರು ತಮ್ಮ ಸಾಹಿತ್ಯದ ಮೂಲಕ ನೀಡಿದ ಸಂದೇಶ ಆಸ್ತಿಕ ಜನರಿಗೆ ತಲುಪಿಸುವ ಉದ್ದೇಶದಿಂದ, ಪೂಜ್ಯರ ಅಭಿಮಾನಿ ಭಕ್ತರ ಮಹಾಬಳಗವಾದ ಗದುಗಿನ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯು, ಪೂಜ್ಯರ ಸಾಹಿತ್ಯ ಪ್ರಚಾರದ ಜ್ಞಾನ ದಾಸೊಹ ಕಾಯಕ ಕೈಗೆತ್ತಿಕೊಂಡು, ರಾಜ್ಯದಾದ್ಯಂತ, ‘ಸಾವಿರದ ಸಾಹಿತ್ಯ ಸಾವಿರ ಮನೆ ಮನಗಳಿಗೆ’ ಪುಟ್ಟರಾಜ ಸಾಹಿತ್ಯ ಪ್ರಚಾರ ಅಭಿಯಾನ ಗದುಗಿನಿಂದ ಆರಂಭಿಸಿದೆ. ಈ ಅಭಿಯಾನದ ಮುಂದುವರೆದ ಭಾಗವಾಗಿ ಎರಡನೆಯ ಕಾರ್ಯಕ್ರಮವನ್ನು ಜು. ೨೩ ರಂದು ರವಿವಾರ ಬೆಳಿಗ್ಗೆ ೧೦-೩೦ಕ್ಕೆ ದಾವಣಗೆರೆ ನಗರದ ಬಾಡ್ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಆಯೋಜಿಸಲಾಗಿದೆ.ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಗದುಗಿನ  ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಈ ಸಮಾಂಭದ ಅಧ್ಯಕ್ಷತೆ ವಹಿಸಿಕೊಳ್ಳುವರು. ಶ್ರೀ ವೀರೇಶ್ವರ ಪುಣ್ಯಾಶ್ರಮ ಟ್ರಷ್ಟ್ ಅಧ್ಯಕ್ಷರಾದ ದಾವಣಗೆರೆಯ, ಖ್ಯಾತ ಲೆಕ್ಕ ಪರಿಶೋಧಕರಾದ ಅಥಣಿ ವೀರಣ್ಣ, ಶ್ರೀ ವೀರೇಶ್ವರ ಪುಣ್ಯಾಶ್ರಮ ಟ್ರಷ್ಟ್ ಕಾರ್ಯದರ್ಶಿಗಳಾದ ಎ. ಎಚ್. ಶಿವಮೂರ್ತಿಸ್ವಾಮಿ, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಗೌರವಾಧ್ಯಕ್ಷರಾದ ಅಣಬೇರು ಮಂಜಣ್ಣ, ಇವರು ಅತಿಥಿಗಳಾಗಿ ಭಾಗವಹಿಸುವರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ, ಸಂಗೀತ ಶಿಕ್ಷಕ ಶಿವಬಸಯ್ಯ ಚರಂತಿಮಠ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಸುಧಾ ಮಂಜುನಾಥ ಜಿಲ್ಲಾ ಅಧ್ಯಕ್ಷರಾದ ಶ್ರೀಗಂಧ ರೆಸಿಡೆನ್ಸಿ ಮಾಲೀಕರಾದ ವಿನಾಯಕ ಪಿ. ಬಿ. ಜಿಲ್ಲಾ ಉಪಾಧ್ಯಕ್ಷ, ಸಂಗೀತ ಗುರು ರೇವಣಸಿದ್ಧಪ್ಪ ಎಂ. ಕೆ. ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಸೌಮ್ಯಾ ಸತೀಶ್ ಧಾರವಾಡ, ಸಮಿತಿಯ ರಾಜ್ಯ ಕಾರ್ಯದರ್ಶಿ ಬೆಳಗಾವಿಯ ಪ್ರೊ. ಮಂಜುಶ್ರೀ ಹಾವಣ್ಣವರ  ಉಪಸ್ಥಿತರಿರುವರು.ಆಗಮಿಸುವ ಅತಿಥಿಗಳು ಪುಟ್ಟರಾಜಗುರು ವಚನ ಪ್ರಭಾ ಸಂಕಲನವನ್ನು ಸಾಂಕೇತಿಕವಾಗಿ ಕೆಲವು ಸದಸ್ಯರಿಗೆ ನೀಡು ಮೂಲಕ ‘ಪುಟ್ಟರಾಜ ಸಾಹಿತ್ಯ ಪ್ರಚಾರ ಅಭಿಯಾನಕ್ಕೆ ಚಾಲನೆ’ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ಮತ್ತು ರಾಜ್ಯದ ಆಯ್ದ ೨೫ ಕವಿವಳಿಂದ ‘ಕಲೆಗೆ ಕಣ್ಣಿತ್ತ ಪೂಜ್ಯರು ಕವಿಗೋಷ್ಠಿ’ ನಡೆಯಲಿದೆ. ಗುರು ಪುಟ್ಟರಾಜ ಗಾನ ಲಹರಿ ಮಹಿಳಾ ಕಲಾ ತಂಡದ ಸದಸ್ಯರಿಂದ‘ ಪುಟ್ಟರಾಜರು ರಚಿಸಿದ ವಚನಗಳ ಸಮೂಹ ವಚನ ಗಾಯನವನ್ನು ಆಯೋಜನೆಮಾಡಲಾಗಿದೆ. ಶ್ರೀಮತಿ ವಾಣಿ ಬಸವರಾಜ್ ಉಪನ್ಯಾಸಕರು ಲುಂಬಿನಿ ಕಾಲೇಜು, ದಾವಣಗೆರೆ ಇವರು ಕವಿಗೋಷ್ಠಿ ನೀರೂಪಣೆ ಮಾಡಲಿದ್ದಾರೆ ಈ ಅಪೂರ್ವ ಕಾರ್ಯಕ್ರಮಕ್ಕೆ ದಾವಣಗೆರೆ ಪೂಜ್ಯರ ಅಭಿಮಾನಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ರಾಜ್ಯ ಸಂಘಟನಾ ಕಾರ್ಯದರ್ಶಿ, ಶಿವಬಸಯ್ಯ ಚರಂತಿಮಠ, ಇವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.