
ಬೀದರ್ :ಮಾ.5: ನಗರದ ಸಪ್ತಸ್ವರ ಕಲಾ ಸಂಸ್ಥೆ ನಾಗಮಾರಪಳ್ಳಿ ಅಡಿಯಲ್ಲಿ ಲಿಂಗೈಕ್ಯ ಡಾ.ಪಂಡಿತ ಪುಟ್ಟರಾಜ ಗವಾಯಿಗಳ 109ನೇ ಜಯಂತ್ಯೋತ್ಸವ ಆಚರಿಸಲಾಯಿತು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶಕ ದತ್ತಪ್ಪಾ ಮಾತನಾಡಿ, ಪುಟ್ಟರಾಜ ಗವಾಯಿಗಳು ಅನೇಕ ಅಂಧ-ಬಡ ಮಕ್ಕಳಿಗೆ ಸಂಗೀತ, ಅನ್ನ ನೀಡಿ ಬೆಳಕಾಗಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಸಂಜು ಸ್ವಾಮಿ ಉಜನಿ, ಪುಂಡಲೀಕರಾವ್ ಪಾಟೀಲ್ ಗುಮ್ಮೆ, ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ್ ನಾಗಮಾರಪಳ್ಳಿ ಉಪಸ್ಥಿತರಿದ್ದರು.