ಪುಟ್ಟರಾಜ ಗವಾಯಿಗಳ ಸಮಾಜ ಸೇವೆ ಅಮೂಲ್ಯ

ಕಲಬುರಗಿ,ಮಾ.4-ಪಂ.ಪುಟ್ಟರಾಜ ಕವಿ ಗವಾಯಿಗಳವರ ಜಯಂತೋತ್ಸವ ಕರ್ನಾಟಕ ಆಂಧ್ರ ಮಹಾರಾಷ್ಟ್ರ ಅಲ್ಲದೆ ದೇಶದ ತುಂಬಾ ನೂರಾರು ಕಡೆ ಆಚರಿಸಲಾಗುತ್ತದೆ ಎನ್ನುವುದಕ್ಕೆ ಅವರು ದೇಶಕ್ಕೆ ಅರ್ಪಿಸಿದ ಅಮೂಲ್ಯ ಸೇವೆ ಕಾರಣವಾಗಿದೆ ಎಂದು ಸಂತೆಕೂಡ್ಲೂರು ಗ್ರಾಮದ ಆರೂಢ ಸಿದ್ದಲಿಂಗೇಶ್ವರ ಮಠದ ಡಾ.ಸಿದ್ದಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಆಂಧ್ರ ಪ್ರದೇಶ ಗಡಿನಾಡ ಆದೋನಿ ತಾಲೂಕಿನ ಸಂತೆಕೂಡ್ಲೂರು ಗ್ರಾಮದ ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಕಲಬುರ್ಗಿಯ ಅನ್ನಪೂರ್ಣ ಪುರಾತನ ಕಲಾ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಪಂ.ಪುಟ್ಟರಾಜ ಗವಾಯಿಗಳ 110ನೇ ಜಯಂತೋತ್ಸವ ಅಂಗವಾಗಿ ಆಯೋಜಿಸಿದ್ದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ಯಶ ಸಾಧಿಸಬಹುದು ಎಂಬ ತಾರ್ಕಿಕ ಲೆಕ್ಕಾಚಾರವನ್ನು ಅಲ್ಲಗಳೆದು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದರು. ಸಂಗೀತದ ಎಲ್ಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ ಕೇಳುಗರನ್ನು ಬೆರಗುಗೊಳಿಸುತ್ತಿದ್ದರು. ನವ ರಸಗಳನ್ನು ಮೇಳೈಸಿ ಪ್ರವಚನ ನೀಡುತ್ತಾ ಸಂಗೀತ ವಾದ್ಯಗಳನ್ನು ಪ್ರಸಂಗಕ್ಕೆ ತಕ್ಕಂತೆ ಬಳಸಿ ಪ್ರವಚನದ ಮೆರುಗನ್ನು ಹೆಚ್ಚಿಸುತ್ತಿದ್ದರು. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ದಿಗ್ಗಜರೆನಿಸಿಕೊಂಡರು ಪುಟ್ಟರಾಜ ಗವಾಯಿಗಳು ಎಂದರು . ನೀಲಕಂಠೇಶ್ವರ ದೇವಸ್ಥಾನ ಅರ್ಚಕರಾದ ಸುಗುರೇಶ್ವರ ಸ್ವಾಮೀಜಿ ನೇತೃತ್ವವಿಸಿದರು. ಅಂಧ ಕಲಾವಿದರಾದ ರಾಜು ಗದಗ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಬಂಡಯ್ಯ ಹಿರೇಮಠ ಸುಂಟನೂರ, ಎರಿಸ್ವಾಮಿ ಮಠದ ಸಮ್ಮುಖ ವಹಿಸಿದ್ದರು. ಕಲಾವಿದರಾ ಸಂಗಮೇಶ ನೀಲಾ, ವಿನುತಾ ಕೇದಾರಸ್ವಾಮಿ, ಮಲ್ಲಪ್ಪ ತೊಂಡಿಹಾಳ, ಶೇಖರಪ್ಪ ಮಾಸ್ತರ್, ಚಂದ್ರಯ್ಯ ಬನ್ನಿಮಟ್ಟಿ ಇನ್ನೂ ಅನೇಕ ಕಲಾವಿದರು ಸಂಗೀತ ಸುಧೆಯನ್ನು ನೀಡಿದರು. ಉಲ್ತಿ ವೀರಭದ್ರಪ್ಪ, ಲಿಂಗನಗೌಡರು, ಸಿದ್ದಲಿಂಗಪ್ಪ ಕುರುಬರ ಉಪಸ್ಥಿತರಿದ್ದರು. ಉಲ್ತಿ ಚನ್ನಬಸಪ್ಪನವರು ನಿರೂಪಿಸಿದರು ಗ್ರಾಮದ ಅನೇಕ ಸಂಗೀತ ಅಭಿಮಾನಿಗಳ ಭಾಗಿಯಾಗಿದ್ದರು.