ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೆಕಲಾವಿದರ ಅಭಿವೃದ್ಧಿ ನಿಗಮ ಬೇಕು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.14: ತಾಲೂಕಿನ ಸಂಗನಕಲ್ಲು ಗ್ರಾಮದ ವೀಣಾ ಶ್ರೀ ಮಹಿಳಾ ಕಲಾ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ವಿಶೇಷ ಘಟಕದ ಪ್ರಾಯೋಜಿತ ಕಾರ್ಯಕ್ರಮದಡಿ ನಿನ್ನೆ ಸಂಜೆ ನಗರದ ಸಣ್ಣ ಮಾರ್ಕೆಟ್ ಹತ್ತಿರದ ಶಾಂಭವಿ ದೇವಸ್ಥಾನದ  ವೇದಿಕೆಯಲ್ಲಿ  ಡಾ. ಪಂ. ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
 ಜನಪದ ಕಲಾವಿದ ಎಸ್. ಎಂ. ಹುಲುಗಪ್ಪ ವಾದ್ಯ ನಡೆಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ,  ನಾಡಿನ ಸಂಗೀತ ಕ್ಷೇತ್ರಕ್ಕೆ ಗದುಗಿನ ಪುಟ್ಟರಾಜ ಗವಾಯಿಗಳ ಕೊಡುಗೆ ಅನನ್ಯ. ಅಲ್ಲದೆ ಗದುಗಿನ ಆಶ್ರಮದ ಸಾವಿರಾರು ಅಂದ ಅನಾಥ ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣ ನೀಡಿ ಅವರ ಕತ್ತಲ ಬದುಕಿಗೆ ಜ್ಯೋತಿಯಾಗಿ ಬಂದ ಮಹಾನ್ ತಪಸ್ವಿಗಳು.  ಇಂಥವರ ಗರಡಿಯಲ್ಲಿ ಸಂಗೀತ ವಿದ್ಯೆ ಕಲಿತ ಅದೆಷ್ಟೋ ಕಲಾವಿದರು ದೇಶ ವಿದೇಶಗಳಲ್ಲಿ ನಾಡಿನ ಕೀರ್ತಿಯನ್ನು ಮೆರೆದಿದ್ದಾರೆ ಇತ್ತೀಚಿನ ದಿನಗಳಲ್ಲಿ  ತಬಲಾ ಹಾರ್ಮೋನಿಯಂ ಹಾಗೂ ಶಾಸ್ತ್ರೀಯ ಸಂಗೀತ ದಂತ ಕಲಾವಿದರ ಬದುಕು ದುಸ್ತರವಾಗಿದೆ ಕಾರಣ ಮೊಬೈಲ್ಗಳ ಮೂಲಕ ಕರೋಕೆ ಸಾಂಗ್ ಗಳನ್ನು ಹಾಡುವಂತ  ಫ್ಯಾಷನ್ ಹೆಚ್ಚಾಗಿದ್ದು ಇದರಿಂದ ವಾದ್ಯ ನೋಡಿಸಿಕೊಂಡ ಜೀವನ ಸಾಗಿಸುವ ಅದೆಷ್ಟೋ ಬಡ ಕಲಾವಿದರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದಂತಾಗಿದೆ. ಕಲಾವಿದರು ಈ ನಾಡಿನ ಸಾಂಸ್ಕೃತಿಕ ಸಂಪತ್ತು ಇವರನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಇವರ ಕಷ್ಟ ನೋವುಗಳಿಗೆ ಸರ್ಕಾರ  ಪ್ರತ್ಯೇಕವಾಗಿ ಕಲಾವಿದರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಹಾಗೂ ಗ್ರಾಮ ಪಂಚಾಯಿತಿ ನಗರ ಪಾಲಿಕೆಗಳಲ್ಲಿ ಶೇಕಡ 3 ಸಾಂಸ್ಕೃತಿಕ ನಿಧಿ ಸ್ಥಾಪಿಸಿ  ಕಲಾವಿದರಿಗಾಗಿ ವಿನಿಯೋಗಿಸಬೇಕೆಂದು ಒತ್ತಾಯಿಸಿದರು.
ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜಿತದಡಿಯಲ್ಲಿ  ಹರಿ ಕೃಷ್ಣ ಸಂಗನಕಲ್ಲು ಇವರಿಂದ ಸುಗಮ ಸಂಗೀತ ಹಾಗೂ ಸಿರುಗುಪ್ಪದ ಈಶ್ವರಿ ತಂಡ ಮತ್ತು ಗಂಗಮ್ಮ, ಶಾರದ ,ಮೈನಾ, ತಂಡದಿಂದ ಸಮೂಹ ನೃತ್ಯದ  ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು. ಹಾರ್ಮೋನಿಯಂ  ಸಾಥ್ ಕೆ. ಜಿ ಶಿವಕುಮಾರ್ ವಾದ್ಯ ಸಂಗೀತ ಹೇಮಂತ್ ಕುಮಾರ್ ಸಂಡೂರು ನುಡಿಸಿದರು.
 ಮಹಾ ನಾಯಕ ಡಾ. ಬಿ ಆರ್ ಅಂಬೇಡ್ಕರ್ ಸಂಘದ ರಾಜ್ಯಾಧ್ಯಕ್ಷ ಕುರವಳ್ಳಿ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಕ್ಷಯ ಕಲಾ ಟ್ರಸ್ಟಿನ ಅಧ್ಯಕ್ಷ ಹೆಚ್ ಜಿ ಸುಂಕಪ್ಪ, ಸಿರುಗುಪ್ಪದ ದೊಡ್ಡ ಹುಸೇನಪ್ಪ, ಶಿವಕುಮಾರ್ ವಕೀಲರು, ಕಲ್ಕಂಬ ಆನಂದ,  ಅಶ್ವಿನಿ ಮರಿಯಮ್ಮನಹಳ್ಳಿ ವೇದಿಕೆಯಲ್ಲಿದ್ದರು.
ಎರಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರೆ ವಂದನಾರ್ಪಣೆ ರಮೇಶ್ ನೆರವೇರಿಸಿದರು.

One attachment • Scanned by Gmail