ಪುಟ್ಟರಾಜರು ಸರ್ವರ ಹೃದಯದಲ್ಲೆ ರಾಜರಾಗಿದ್ದಾರೆ :ಜಿಳ್ಳೆ

ಕಲಬುರಗಿ,ಸೆ.25: ಅಂಧರ ಬಾಳಿಗೆ ಬೆಳಕಾಗಿ ಜಗತ್ತಿಗೆ ಜ್ಯೋತಿಯಾಗಿ ಸರ್ವರ ಹೃದಯದಲ್ಲಿ ರಾಜರಾಗಿ ಬೆಳಗುತ್ತಿದ್ದಾರೆ ಪಂಡಿತ ಪುಟ್ಟರಾಜರು ಎಂದು ಕೆಎಸ್ಆರ್ ಪಿ ಕಮಾಂಡೆಂಟ್ ರಾದ ಬಸವರಾಜ ಜಿಳ್ಳೆ ಹೇಳಿದರು.ಕನ್ನಡ ಜಾನಪದ ಪರಿಷತ ಕಲಬುರಗಿ ತಾಲೂಕu ಉತ್ತರ ವಲಯದ ವತಿಯಿಂದ ಪಂಡಿತ ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಕಲಬುರಗಿ ನಗರದ ಆರಾಧನಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಿರಿಯ ಸಂಗೀತ ಕಲಾವಿದರಿಗೆ ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಶರಣರು, ಸಂತರು, ಮಹಾತ್ಮರು ಜನಿಸಿದ ನಾಡಲ್ಲಿ ನಾವು ಹುಟ್ಟಿರುವುದೇ ನಮ್ಮ ಸೌಭಾಗ್ಯ ಇಂತಹ ಮಹಾಜ್ಞಾನಿಗಳ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಸಮೃದ್ಧ ಜೀವನ ಸಾಗಿಸಬೇಕೆಂದು ಹೇಳಿದರು. ಮುಖ್ಯ ಅತಿಥಿಗಳಾದ ರಾಜಕೀಯ ಮುಖಂಡರಾದ ನೀಲಕಂಠರಾವ ಮುಲಗೆ ಮಾತನಾಡುತ್ತಾ ಬಡವರ, ನಿರ್ಗತಿಕರ ಹಾಗೂ ಮಕ್ಕಳಲ್ಲಿಯೆ ದೈವ ಕಂಡು ನಿಸ್ವಾರ್ಥ ಸೇವೆ ಮಾಡುವವರು ದೇವರಾಗುತ್ತಾರೆ. ಅಂತಹವರ ಸಾಲಿನಲ್ಲಿ ಬರುವವರು ಸಂಗೀತ ಜ್ಞಾನಿಯಾದ ಪಂಡಿತ್ ಪುಟ್ಟರಾಜ ಗವಾಯಿಗಳು ಸಹ ಒಬ್ಬರು ಎಂದು ಹೇಳಿದರು. ಕಾರ್ಯಕ್ರಮದ ಆಯೋಜಕರಾದ ಕನ್ನಡ ಜಾನಪದ ಪರಿಷತ್ ಉತ್ತರ ವಲಯ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಮಾತನಾಡುತ್ತಾ ಪುಟ್ಟರಾಜ ಅಜ್ಜರು ಮಾಡಿದ ಸೇವೆ ಅನನ್ಯ ಅವರ ಹೆಸರಿನಲ್ಲಿಯೇ ಒಂದು ಅಗಾಧವಾದ ಶಕ್ತಿ ಇದೆ ಆ ಶಕ್ತಿಯಿಂದಲೇ ಸಾವಿರಾರು ಶಿಷ್ಯರು ಸಂಗೀತದಿಂದ ಜಗ ಬೆಳಗುತ್ತಿದ್ದಾರೆ. ಕೇವಲ ಹೆಸರಿಗೆ ಸೀಮಿತ ಮಾಡದೆ ಅವರ ವಿಚಾರಧಾರೆಯನ್ನು ಅಳವಡಿಸಿಕೊಳ್ಳುವುದು ಅವಶ್ಯಕತೆ ಇದೆ ಎಂದು ಹೇಳಿದರು. ಸನ್ಮಾನಿತ ಗೊಂಡ ಈ ಭಾಗದ ಸಂಗೀತ ಕಲಾವಿದರಾದ ಶಿವರುದ್ರ ಸ್ವಾಮಿ ಗೌಡಗಾಂವ ಮಾತನಾಡುತ್ತಾ ಈ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ವೇದಿಕೆಯ ಕೊರತೆ ಇದೆ. ಆದರೆ ಅಟ್ಟೂರ ಅವರು ನಿರಂತರವಾಗಿ ಹಲವಾರು ಜನರಿಗೆ ವೇದಿಕೆ ನೀಡಿ ಸಮಾಜಕ್ಕೆ ಪರಿಚಯ ಮಾಡಿಸುತ್ತಿರುವ ಕಾರ್ಯ ಶ್ಲಾಘನೀಯ. ಮುಖ್ಯ ಅತಿಥಿಗಳಾಗಿ ಹಿರಿಯ ಸಂಗೀತ ಕಲಾವಿದರಾದ ಅಮರಪ್ರಿಯ ಹಿರೇಮಠ, ಕನ್ನಡ ಜಾನಪದ ಪರಿಷತ ಜಿಲ್ಲಾ ಅಧ್ಯಕ್ಷರಾದ ಎಂ ಬಿ ನಿಂಗಪ್ಪ, ಮಾತೋಶ್ರೀ ಮಹಿಳಾ ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ. ಶಿವಶಂಕರ ಪೂಜಾರಿ, ಶರಣ ಚಿಂತಕರಾದ ಬಾಬುರಾವ ಪಾಟೀಲ ಚಿತ್ತಕೋಟ ಆಗಮಿಸಿದ್ದರು. ಆರಾಧನಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ಚೇತನಮಾರ್ ಗಾಂಗಜಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಸಂಗೀತ ಕಲಾವಿದರಾದ ಶಿವರುದ್ರಯ್ಯ ಸ್ವಾಮಿ ಗೌಡಗಾಂವ, ಬಸವರಾಜ ಪಾಟೀಲ ಜಂಬಗಾ (ಬಿ), ಮಹಾಂತೇಶ ಮೇತ್ರಿ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಶ್ರವಣಕುಮಾರ ಮಠ ಪ್ರಾರ್ಥಿಸಿದರು. ಕಾಶಿನಾಥ ಪಾಟೀಲ ನಿರೂಪಿಸಿದರು. ರೇವಣಸಿದ್ದಪ್ಪ ಇವಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಧುಳಯ್ಯ ಮಠಪತಿ ಜಂಬಗಾ (ಬಿ), ಆನಂದ ಪೂಜಾರಿ, ಸದಾಶಿವ ಮಿರ್ಜಿ, ಅರ್ಪಿತಾ ಪಾಟೀಲ, ಕೃತಿಕಾ ಚಾರಿ, ಉಮೇಶ ಕುಲಕರ್ಣಿ, ಅಪ್ಪರಾಯ ಪಟ್ಟಣ, ಜನಪದ ಕಲಾವಿದ ರಾಜು ಹೆಬ್ಬಾಳ, ಉಪನ್ಯಾಸಕರು ವಿದ್ಯಾರ್ಥಿಗಳು ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು.