ಪುಟಿದೇಳುವ ನಿರೀಕ್ಷೆಯಲ್ಲಿ ಬೆಂಗಳೂರು

ದುಬೈ, ಅ. ೧೭- ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಐಪಿಎಲ್ ನ ೩೩ನೇ ಪಂದ್ಯದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಪುಟಿದೇಳುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿದೆ.
ಹಿಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋಲುವುದರೊಂದಿಗೆ ಹಾಲಿ ಟೂರ್ನಿಯಲ್ಲಿ ರಾಹುಲ್ ಬಳಗದ ಎದುರು ೨ನೇ ಸೋಲು ಕಂಡಿರುವ ವಿರಾಟ್ ಕೊಹ್ಲಿ ಬಳಗ, ರಾಯಲ್ಸ್ ವಿರುದ್ಧ ಪೂರ್ಣ ಅಂಕ ಕಲೆಹಾಕುವ ಇರಾದೆ ಹೊಂದಿದೆ. ಪಂಜಾಬ್ ವಿರುದ್ಧ ನಾಯಕ ಕೊಹ್ಲಿ ಉತ್ತಮ ಬ್ಯಾಟಿಂಗ್ ತೋರಿದರೂ, ಸ್ಟಾರ್ ಬ್ಯಾಟ್ಸ್ ಮನ್ ಎಬಿ ಡಿ ವಿಲಿಯರ್ಸ್ ವೈಫಲ್ಯ ತಂಡದ ಹಿನ್ನಡೆಗೆ ಕಾರಣ ಎನ್ನಲಾಗಿದೆ. ಇನ್ನೂ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಯಜೇಂದ್ರ ಚಹಲ್ ಅವರ ಸ್ಥಿರತೆ ಕಾಯ್ದುಕೊಂಡರೂ ವೇಗಿಗಳಿಂದ ಪರಿಣಾಮಕಾರಿ ಪ್ರದರ್ಶನ ಮೂಡದಿರುವುದು ಆರ್ ಸಿಬಿ ತಂಡವನ್ನು ಎಚ್ಚರಿಸಿದೆ.
ಅತ್ತ ಹೈದರಾಬಾದ್ ವಿರುದ್ಧ ಗೆದ್ದು ಕೊನೆಗೂ ಜಯದ ಹಳಿಗೆ ಮರಳಿದ್ದ ಸ್ಮಿತ್ ಬಳಗ, ಮತ್ತೆ ಡೆಲ್ಲಿ ವಿರುದ್ಧ ೨ನೇ ಸೋಲು ಕಾಣುವುದರೊಂದಿಗೆ ಮತ್ತೆ ಹಳೆಯ ಚಾಳಿ ಮುಂದುವರಿಸಿದೆ. ಆದರೆ ಅ.೩ರಂದು ಬೆಂಗಳೂರು ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭರವಸೆಯಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ನೋಡುತ್ತಿದೆ.
ಸಂಭಾವ್ಯ ತಂಡಗಳು
ಬೆಂಗಳೂರು
ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಆ?ಯರೋನ್ ಫಿಂಚ್, ಎಬಿ ಡಿ ವಿಲಿಯರ್ಸ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಕ್ರಿಸ್ ಮೋರಿಸ್, ಇಸುರು ಉಡಾಣ, ನವ್ ದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯಜ್ವೇಂದ್ರ ಚಹಲ್, ಆಯಡಂ ಝಂಪಾ, ಪಾರ್ಥಿವ್ ಪಟೇಲ್.
ರಾಜಸ್ಥಾನ್ ರಾಯಲ್ಸ್
ಸ್ಟೀವನ್ ಸ್ಮಿತ್ (ನಾಯಕ), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತೆವತಿಯಾ, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ, ಯಶಸ್ವಿ ಜೈಸ್ವಾಲ್, ಆ?ಯಂಡ್ರ್ಯೂ ಟೈ.
ಪಂದ್ಯ ಆರಂಭ: ಮಧ್ಯಾಹ್ನ ೩.೩೦ಕ್ಕೆ
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್