ಪುಟಾಣಿ ಮಕ್ಕಳಿಂದ ಸರಳ ರೀತಿ ಗಣೇಶೋತ್ಸವ ಆಚರಣೆ

ಜೇವರ್ಗಿ :ಸೆ.21: ರಾಮಸೇನೆ- ಶ್ರೀರಾಮಸೇನೆ ಗಣೇಶ ಶೋಭಾಯಾತ್ರೆಗಳ ಅದ್ದೂರಿ ನಡುವೆ ಲಕ್ಷ್ಮೀಚೌಕ್ ನ ಕಲ್ಲನವರ ಬಡಾವಣೆಯಲ್ಲಿಯೊಂದು ಸರಳ ಗಣೇಶೋತ್ಸವ ಜರುಗಿದೆ. ಶ್ರವಣ್ ಬಸವರಾಜ ಕಲ್ಲಾ ಹೊಲದ ಎರೆಮಣ್ಣು ತಂದು ಗಣೇಶನ ಸ್ಥಾಪಿಸಿ, ಗೆಳೆಯನ ಮನೆಯಿಂದ ಅಲಂಕಾರಿಕ ವಸ್ತುಗಳಿಂದ ಸೈಕಲ್ ಗೆ ಶ್ರಂಗರಿಸಿದ್ದಾರೆ. ಇನ್ನೊಬ್ಬ ಗೆಳೆಯ ಶರತ್ ದೇಶಮುಖ ಅರ್ಧ ಕೆಜಿ ಅಕ್ಕಿ, ಉಪ್ಪು ಅರಿಶಿಣ, ಖಾರ, ಎಣ್ಣೆಯಿಂದ ಪಲಾವ್ ಸಿದ್ದಪಡಿಸಿ ಗಣೇಶನಿಗೆ ನೈವೇದ್ಯ ಅರ್ಪಿಸಿದ ನಂತರ ಎಲ್ಲಾ ಗೆಳೆಯರು ಸೇರಿ ಪ್ರಸಾದ ಸ್ವೀಕರಿಸಿದ್ದಾರೆ. ನಂತರ ಸೈಕಲ್ ಮೇಲೆ ಗಣೇಶನ ಕೂಡಿಸಿ ತೊದಲ ನುಡಿಯಲ್ಲಿ ವಚನ ಮಹಾಮಂಗಲದೊಂದಿಗೆ ಪೂಜೆ ಸಲ್ಲಿಸಿ ಜಯಗೋಷ ಹಾಕುತ್ತಾ ಮೆರವಣಿಗೆ ನಡೆಸಿ ಕೊನೆಗೆ ಬಾವಿಯಲ್ಲಿ ವಿಸರ್ಜನೆ ಮಾಡಿದರು