ಪುಟಾಣಿಗಳಿಗೆ ಚಾಕೋಲೇಟ್, ಬಿಸ್ಕತ್, ಗುಲಾಬಿ ಹೂವು ನೀಡಿ ಸ್ವಾಗತ

ಮೈಸೂರು, ನ.8:- ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಶಾಲಾ ಆವರಣಕ್ಕೆ ಸತತ ಇಪ್ಪತ್ತು ತಿಂಗಳ ಕೋವಿಡ್ ಮಹಾಮಾರಿಯ ಅಟ್ಟಹಾಸದಿಂದ ಶಾಲಾ ಸಂಸ್ಕೃತಿ ಹಾಗೂ ಪರಿಸರವನ್ನು ಕಳೆದುಕೊಂಡಿದ್ದ ಪುಟಾಣಿಗಳು ನೂರ್ಮಡಿಯ ಸಡಗರ ಸಂಭ್ರಮದೊಡನೆ ಶಾಲಾ ಅಂಗಳಕ್ಕೆ ಕಾಲಿಟ್ಟರು.
ನಿಷ್ಕಲ್ಮಷ ಆ ಪುಟ್ಟ ಹೃದಯಗಳ ಸಂತೋಷಕ್ಕೆ ಮಿತಿಯೇ ಇರದ ಅವರ ಖುಷಿಗೆ ಮತ್ತಷ್ಟು ಇಂಬು ನೀಡುವಂತೆ ಇಂದು ನಗರದ ನಿರ್ಮಲಾ ಶಿಕ್ಷಣ ಸಂಸ್ಥೆ ಗೋಕುಲಂ ಇಲ್ಲಿ ಮಕ್ಕಳಿಗೆ ಪ್ರಿಯವಾದ ಚಾಕೋಲೇಟ್ ಬಿಸ್ಕತ್ ಹಾಗೂ ಗುಲಾಬಿ ಹೂವುಗಳನ್ನು ನೀಡುವ ಮೂಲಕ ಪುಟ್ಟ ಹೆಜ್ಜೆಗಳ ಗೆಜ್ಜೆ ಸದ್ದಿಗೆ ಹದಯಸ್ಪರ್ಶಿ ಸ್ವಾಗತ ನೀಡಲಾಯಿತು.
ಭಯ ಬಿಟ್ಟು ಜಾಗೃತಿ ಪಡೆಯಿರಿ ಎಂದು ಸಲಹೆ ನೀಡಲಾಯಿತು.
ಈ ವೇಳೆ ಟ್ರಸ್ಟಿನ ಅಧ್ಯಕ್ಷರಾದ ಸತೀಶ್ ಗೌಡ, ಪ್ರಧಾನ ಕಾರ್ಯದರ್ಶಿ ರವಿ ಎ, ಉಪಾಧ್ಯಕ್ಷ ಕುಮಾರ್ ಗೌಡ. ದಂತ ವೈದ್ಯ ಲೋಕೇಶ್ ಉದ್ಯಮಿ ಅರುಣ್ ಕುಮಾರ್ ಹಾಜರಿದ್ದರು.