ಪುಚ್ಚಲದಿನ್ನಿ ಶಾಲೆ : ಸಿಇಒರಿಂದ ಮಕ್ಕಳಿಗೆ ಮೊಟ್ಟೆ ವಿತರಣೆ

ರಾಯಚೂರು.ಡಿ.೦೨-ಸ.ಹಿ.ಪ್ರಾ.ಶಾಲೆ ಪುಚ್ಚಲದಿನ್ನಿ ತಾ.ಜಿ ರಾಯಚೂರು ಶಾಲೆಯಲ್ಲಿ ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶೇಖ್ ತನ್ವಿರ್ ಆಸಿಫ್ ಅವರು ಮಕ್ಕಳಿಗೆ ಬಿಸಿಯೂಟದಲ್ಲಿ ಮೊಟ್ಟೆ ಬಡಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಿಇಒ ರವರು ಮಕ್ಕಳೊಂದಿಗೆ ಬಿಸಿಯೂಟ ಸವಿದು, ರುಚಿಯ ಬಗ್ಗೆ ಸಂವಾದಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ ದೊಡ್ಡಮನಿ, ಈರಣ್ಣ ಕೋಸಗಿ ಇಒಎಮ್‌ಡಿಎಮ್ ಜಿಲ್ಲಾ ಪಂಚಾಯ್ತಿ ರಾಯಚೂರು, ಶಿವಾನಂದ ಬಿರಾದರ ತಾಲೂಕ ಬಿಸಿಯೂಟ ಅಧಿಕಾರಿಗಳು ರಾಯಚೂರು, ಮುಖ್ಯಗುರುಗಳಾದ ರಾಘವೇಂದ್ರ ಹಾಗೂ ಪಿಡಿಓ, ಸಿಆರ್‌ಪಿ, ಶಿಕ್ಷಕ ಮಿತ್ರರು ಹಾಜರಿದ್ದರು.