ಪುಕ್ಕಟೆಯಾಗಿ ಮತ ನೀಡಬೇಡಿ ಕ್ಷೇತ್ರ ಅಭಿವೃದ್ದಿಯಾಗಿದ್ದರೆ ಮಾತ್ರ ಮತ ನೀಡಿ: ಶಾಸಕ ಸೋಮನಗೌಡ ಪಾಟೀಲ

ಬಸವನಬಾಗೇವಾಡಿ:ಮಾ.14: ಕ್ಷೇತ್ರದ ಜನತೆ ಯಾರು ನನಗೆ ಪುಕ್ಕಟೆ ಮತ ನೀಡಬೆಡಿ ಕ್ಷೇತ್ರದಲ್ಲಿ ನಾನು ಆಯ್ಕೆ ಆದ ನಂತರ ಅಭಿವೃದ್ದಿ ಕಾರ್ಯಗಳಾಗಿದ್ದರೆ ಮಾತ್ರ ನನಗೆ ಮತ್ತೊಮ್ಮೆ ಮತ ನೀಡಿ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.

ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಪರಮಾನಂದ ವೃತ್ತದಲ್ಲಿ ಲೋಕೊಪಯೋಗಿ ಇಲಾಖೆ ಉಪ ವಿಭಾಗ ಬಸವನಬಾಗೇವಾಡಿಯ 2022-23ನೇ ಸಾಲಿನ ಲೆಕ್ಕ ಶಿರ್ಷಿಕೆ 5054 ಅಪೇಂಡಿಕ್ಸ-ಇ ರಾಜ್ಯ ಹೆದ್ದಾರಿ ಸುಧಾರಣೆ ಯೋಜನೆ ಅಡಿಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿರಾಡೋಣ-ಲಿಂಗಸೂರ ರಾಜ್ಯ ಹೆದ್ದಾರಿ -41 ಕೀ,ಮಿ, 116,70 ರಿಂದ 122ರ ವರೆಗಿನ ರಸ್ತೆ ಅಗಲೀಕರಣ ಗೊಳಿಸಿ ಅಭಿವೃದ್ದಿ ಪಡಿಸುವ ಅಂದಾಜು 450 ಲ್ಷ ಮೊತ್ತದ ಕಾಮಗಾರಿಯ ಭೂಮಿ ಪೂಜೆ ನೇರವೆರಿಸಿ ಮಾತನಾಡಿದ ಅವರು ನಾನು ಸರ್ಕಾರದಿಂದ ಸಾಕಷ್ಟು ಅನುಧಾನವನ್ನು ತಂದು ಕ್ಷೇತ್ರದ ಅಭಿವೃದದಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೆನೆ, ಕ್ಷೇತ್ರದಲ್ಲಿಯೇ ಹೂವಿನ ಹಿಪ್ಪರಗಿ ಒಂದು ಡೊಡ್ಡ ಹೋಬಳಿ ಕೇಂದ್ರವಾಗಿದ್ದು, ರಾಜ್ಯ ಬಿಜ್ಜಳನ ಹೆದ್ದಾರಿಯು ಹಾಯ್ದು ಹೋಗಿದೆ,

ದೇವರಹಿಪ್ಪರಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳು ಸಂಪೂರ್ಣ ಹದಿಗೆಟ್ಟು ಪರದಾಡುವ ಪರಿಸ್ಥಿತಿ ಇತ್ತು ನಾನು ಶಾಸಕನಾಗಿ ಆಯ್ಕೆಯಾದ ನಂತರ ಅಂತಹ ಹಲವಾರು ಸಮಸ್ಯಗಳನ್ನು ಬಗೆಹರಿಸಿದ್ದೆನೆ. ಈ ನಿಟ್ಟಿನಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿರಾಡೋಣ-ಲಿಂಗಸೂರ ರಾಜ್ಯ ಹೆದ್ದಾರಿ ಅಭಿವೃದ್ದಿಗಾಗಿ ನಾಲ್ಕು ವರೆ ಕೋಟಿ ಅನುಧಾನವನ್ನ ತರಲಾಗಿದೆ ಇದಕ್ಕೆ ಗ್ರಾಮಸ್ಥರು ಸಹಾಯ ಸಹಕಾರ ಮುಖ್ಯವಾಗಿರುತ್ತದೆ, ನಾನು ಕ್ಷೇತ್ರದಲ್ಲಿ ಯಾವುದೇ ಜಾತಿ ಭೇದ ಮಾಡದ ಸರ್ವ ಧರ್ಮದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೆನೆ 2023ರ ಚುನಾವಣೆಯಲ್ಲಿ ಮತದಾರ ಭಾಂದವರು ಮತ್ತೊಮ್ಮೆ ನನಗೆ ಆರ್ಶಿವದಿಸಿ ನಿಮ್ಮೇಲ್ಲರ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ನಮ್ಮ ತಂದೆಯವರು ಸಚಿವರಾಗಿದ್ದಾಗ ಪ್ರತಿಯೊಬ್ಬ ರಾಜಕಾರಣಿಗೊಳೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದರು ರಾಜ್ಯದಲ್ಲಿ ನಮ್ಮ ತಂದೆಯವರ ಹೆಸರಿನಿಂದ ನನ್ನನ್ನು ಗುರುತಿಸಿ ನನಗೆ ನಮ್ಮ ಸರ್ಕಾರ ಸಾಕಷ್ಟು ಅನುಧಾನವನ್ನು ನೀಡಿದೆ ಎಂದರು.

ಮುಖಂಡ ಗುರು ಗುಡಿಮನಿ ಮಾತನಾಡಿ ಕಳೆದ 10 ವರ್ಷಗಳಿಂದ ಅಭೀವೃದ್ದಿ ವಂಚಿತ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಸೋಮನಗೌಡ ಪಾಟೀಲ ಸಾಸನೂರ ಅವರು ಶಾಸಕರಾಗಿ ಆಯ್ಕೆ ಆದ ನಂತರ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನ ಮಾಡಿದ್ದಾರೆ, ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸೋಮನಗೌಡರು ಮತ್ತೊಮ್ಮೆ ಶಾಸಕರಾಗುವದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.

ಈ ಸಂಧರ್ಭದಲ್ಲಿ ಮಲ್ಲಯ್ಯ ಚಿಕ್ಕಮಠ, ಮುಖಂಡರಾದ ಜಿ,ಬಿ, ಬಾಗೇವಾಡಿ, ಎಮ್À ಎಸ್ ನಾಯನೇಗಲಿ, ಹಣಮಂತ್ರಾಯ ಗುಣಕಿ, ಮಲ್ಲು ನಾಡಗೌಡ, ಅಶೋಕ ಬ್ಯಾಕೋಡ, ಬಸವರಾಜ ಶಿವಯೋಗಿ, ಮಲ್ಲು ಕೋಲಕಾರ, ಕುಮಾರಗೌಡ ಪಾಟೀಲ, ಮಲ್ಲಣ್ಣ ಲಚ್ಯಾಣ, ಸುಭಾಸ ಗುಂಡಾನವರ, ಪರಶುರಾಮ ಬಿರಾದಾರ, ಶರಣಗೌಡ ಬಿರಾದಾರ, ಬಸನಗೌಡ ಪಾಟೀಲ, ಗುತ್ತಿಗೆದಾರ ನಾನಾಗೌಡ ಬಿರಾದಾರ ಸೇರಿದಂತೆ ಮುಂತಾದವರು ಇದ್ದರು.