ಪುಂಡಲಿಂಗ ಶಿವಯೋಗಿಗಳ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ

ಇಂಡಿ :ಜು.7:ಭೀಕರ ಬರಗಾಲದಲ್ಲಿ ಮಠದ ಜೋಳವನ್ನು ಸಾರ್ವಜನಿಕರಿಗೆ ಧಾನ ಮಾಡಿದ ಮಹಾನ ಶರಣ ಲಿಂ.ಶ್ರೀ ಪುಂಡಲಿಂಗ ಮಹಾಶಿವಯೋಗಿಗಳು.ಬಡತನದಲ್ಲಿದ್ದರು ಸಹ, ಭಿಕ್ಷೆ ಬೇಡುತ್ತ ಮನೆಯ ಬಾಗಿಲಿಗೆ ಬಂದವರಿಗೆ ಹೋಳಿಗೆ ನೀಡಲು ಪತ್ನಿ ಭಾಗಿರಥಿಗೆ ಹೇಳಿದ ಮಹಾನ್ ಮಹಿಮಾ ಪುರುಷ ಶರಣರಾಗಿದ್ದಾರೆ. ಅಂತಹ ಶರಣರ ಪುಣ್ಯಾರಾಧನೆ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ನಮ್ಮೆಲ್ಲರ ಪುಣ್ಯ. ಶ್ರೀಗಳ ಆಚಾರ,ವಿಚಾರ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಸಿಕ್ಯಾಬ್ ಕಾಲೇಜಿನ ಉಪನ್ಯಾಸಕ ಯು.ಎನ್.ಕುಂಟೋಜಿ ಹೇಳಿದರು.

ಅವರು ಗುರುವಾರÀ ತಾಲೂಕಿನ ಗೋಳಸಾರ ಗ್ರಾಮದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಶ್ರೀ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳ ಸಾನಿದ್ಯ ನಡೆದ ಪುಂಡಲಿಂಗ ಮಹಾಶಿವಯೋಗಿಗಳ 44 ನೇ ಪುಣ್ಯಾರಾಧನೆ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಧರ್ಮಸಭೆಯಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.

ಮಠ ಮಾನ್ಯಗಳು ಜನರಿಗೆ ಧಾರ್ಮಿಕ ಶ್ರೆದ್ದೆ ಮೂಡಿಸುವ ವಿಶ್ವವಿದ್ಯಾಲಯಗಳಿದ್ದಂತೆ.ಧರ್ಮದ ಆಚರಣೆಯಲ್ಲಿ ಮನುಷ್ಯ ಸಮಾಜ ರೂಪಿಸಿಕೊಂಡ ನಿಯಮಗಳು ಹಾಗಾಗೀ ಮಾನವೀಯತೆ ಅದರ ಮೂಲ ಮಂತ್ರವಾಗಬೇಕು .ಪ್ರತಿಯೊಬ್ಬರು ಧರ್ಮದ ತತ್ವವನ್ನು ಪಾಲಿಸುತ್ತ,ಸಹೋದರತ್ವದಿಂದ ಬದುಕಬೇಕು .

ಶ್ರೀ ಪುಂಡಲಿಂಗ ಶಿವಯೋಗಿಗಳು ಮಾನವೀಯತೆ,ಸಮಾನತೆ ಮೌಲ್ಯಗಳನ್ನು ಪ್ರತಿಹಂತದಲ್ಲಿಯೂ ಆಚರಣೆಗೆ ತಂದಿದ್ದಾರೆ. ಸಂಸಾರದಲ್ಲಿ ಇದ್ದುಕೊಂಡು ಪಾರಮಾರ್ಥ ಗೆದ್ದು,ಶಿವಸ್ವರೂಪಿ ಎನಿಸಿಕೊಂಡವರು ಗೋಳಸಾರದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳು ಎಂದು ಹೇಳಿದ ಅವರು,ಶರಣರ ಮಾರ್ಗದಲ್ಲಿ ನಡೆದು ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ಹೇಳಿದರು.ಸಕಲ ಜೀವರಾಶಿಗಳಿಗೆ ಹಿತವನ್ನೆ ಬಯಸುವ ದಿನ,ಅನಾಥರಲ್ಲಿ ಅನುಕಂಪವಿರುವ,ಹೃದಯವಂತಿಕೆಯನ್ನೇ ಮಾನವೀಯತೆ ಎಂದು ತಿಳಿದವರು ಪುಂಡಲಿಂಗ ಶ್ರೀಗಳು.

ಮಾನವೀಯ ಮೌಲ್ಯವನ್ನು ವೃದ್ದಿಪಡಿಸುವುದೇ ನಿಜವಾದ ಧರ್ಮ ಎಂದು ಹೇಳಿದ ಅವರು,ಬಸವಣ್ಣನರು ಶಿವಪ್ರಜ್ಞೆಯನ್ನು ಪ್ರತಿಪಾದನೆ ಮಾಡಿದ್ದೂ ಮಾನವೀಯತೆಯ ಬುನಾದಿಯ ಮೇಲೇಯೇ.ಈಶ್ವರ ಹೊರಗೆಲ್ಲಿಯೂ ಇಲ್ಲ,ವ್ಯಕ್ತಿಯ ಅಂತರಂಗದಲ್ಲಿಯೇ ಇದ್ದಾನೆ ಎಂದು ಅವರು ಸಾರಿದ್ದರು.

ನಾಡಿನ ಕಲ್ಯಾಣಕ್ಕಾಗಿ ಅವತಾರವೆತ್ತಿ,ನಾಡನ್ನು ಬೆಳಗಿದ ಶಂಕರಭಗವತ್ಪಾದರಾಗಲಿ,ಬಸವಣ್ಣವನವರಾಗಲಿ,ಹರಿದಾಸರಾಗಲಿ,ಪುಂಡಲಿಂಗ ಶರಣರಾಗಲಿ ಯಾವೊಂದು ಜನವರ್ಗಕ್ಕೆ ಸೇರಿದವರಲ್ಲ.ಅವರು ಅಖಂಡ ವಿಶ್ವಕ್ಕೆ ಸೇರಿದವರು ಎಂದು ಹೇಳಿದರು.ಮನುಕುಲದ ಉದ್ದಾರವೇ ಅವರೆಲ್ಲರ ಪರಮ ಉದ್ದೇಶವಾಗಿತ್ತು.ಸಮಾಜದಲ್ಲಿನ ಜನರು ಧರ್ಮದ ಹಾದಿಯನ್ನು ಬಿಟ್ಟಾಗ ಅವಾಗ್ಗಾವಗೆ ಶರಣರು,ಸಂತರು ಅವತಾರ ಧರಿಸಿ,ಜನರನ್ನು ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡಿದ್ದಾರೆ.ಪ್ರತಿಯೊಬ್ಬರು ಶರಣರು,ಸಂತರು ಹಾಕಿದ ಮಾರ್ಗದಲ್ಲಿ ನಡೆದು ಶಾಂತಿಯ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಶ್ರೀಮಠದ ಪೀಠಾ„ಪತಿ ಅಭಿನವ ಪುಂಡಲಿಂಗ ಮಹಾಶಿವಯೋಗಿ, ರೋಡಗಿ ಅಭಿನವ ಶಿವಲಿಂಗೇಶ್ವರ ಶ್ರೀ,ಜೈನಾಪೂರದ ಶ್ರೀಗಳು ಸಾನಿಧ್ಯ ವಹಿಸಿದ್ದರು.

ಆನಂದ ಶಾಸ್ತ್ರಿ ಬರೂರ,ಆಲಿಂಗರಾಯ ಮಹಾರಾಮಠ,ಮನೋಹರ ಮಂದೋಲಿಕರ,ಜಿ.ಎನ್.ತೆಗ್ಗೆಳ್ಳಿ, ಜೆ.ಜಿ.ಡೊಂಬಳಿ,ಬಾಬುಗೌಡ ಪಾಟೀಲ,ಎಂ.ಆರ್.ಪಾಟೀಲ ಗೊಳಸಾರ,ಗುರುಲಿಂಗಪ್ಪ ತೆಗ್ಗೆಳ್ಳಿ,ಎಸ್.ಆರ್ª.ಮೇತ್ರಿ,ಹಣಮಂತ ಮಾಲಗಾರ,ಸಂಗಣ್ಣಸಾಹುಕಾರ ನಿಂಬರಗಿ, ಚನ್ನುಗೌಡ ಪಾಟೀಲ,ಬತ್ತುಸಾಹುಕಾರ ಹಾವಳಗಿ,ಶಂಕರಗೌಡ ಪಾಟೀಲ, ಶಿವಲಿಂಗಪ್ಪ ನಾಗಠಾಣ,ರವೀಂದ್ರ ಆಳೂರ,ಆಲಿಂಗರಾಯ ಕುಮಸಗಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಇದೆ ಸಂದರ್ಭದಲ್ಲಿ ಜಿ.ಎನ್.ತೆಗ್ಗೆಳ್ಳಿ ಬರೆದ ಜನಪದರ ದೃಷ್ಠಿಯಲ್ಲಿ ಪುಂಡಲಿಂಗರು ಕೃತಿ ಬಿಡುಗಡೆ ಮಾಡಲಾಯಿತು.ಇದಕ್ಕೂ ಮುಂಚೆ ಶ್ರೀ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳನ್ನು ಕುಂಭಕಳಸದೊಂದಿಗೆ ಸಾರೋಟದಲ್ಲಿ ಮೆರವಣಿಗೆ ಮಾಡಲಾಯಿತು. ಎ.ಪಿ.ಕಾಗವಾಡಕರ ಸ್ವಾಗತಿಸಿದರು.ರವಿ ಆಳೂರ,ನಿರೂಪಿಸಿ, ವಂದಿಸಿದರು.