ಪೀರ ಹಜರತ ಸೈಯ್ಯದ ಅಲ್ಲಿಶಾ ಖಾದರಿ ಉರುಸು

ವಿಜಯಪುರ ಎ.21 -ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಪೀರ ಹಜರತ ಸೈಯ್ಯದ ಅಲ್ಲಿಶ್ಯಾ ಖಾದರಿ ರಹಮತುಲ್ಲಾ ಅಲೈ ಇವರ ಸಂದಲ ಶರೀಫ ದಿ. 19-4-2021 ರಂದು ಆಚರಿಸಲಾಯಿತು.
ಸೈಯ್ಯದ ಸರಫರಾಜಅಹ್ಮದ ಸೈಯ್ಯದ ಬಶೀರಅಹ್ಮದ ಇನಾಮದಾರ ಇವರ ನೇತೃತ್ವದಲ್ಲಿ ಪ್ರತಿ ಸಲದಂತೆ ಈ ಸಲವು ಸರಳ ರೀತಿಯಲ್ಲಿ ಜರುಗಿತು.
ಶೇಗುಣಸಿ ಗ್ರಾಮದ ಆಶೂರಖಾನದಿಂದ ದರ್ಗಾಕ್ಕೆ ಗಂಧ ಮತ್ತು ಹೂ ಪುಷ್ಪಗಳೊಂದಿಗೆ ಆಗಮಿಸಿದರು. ಸೈಯ್ಯದ ಸಯೀರವುಲ್ಲ ಎಸ್. ಮಗರಬಿ ಸಲಾಮ ಓದಿ ಮತ್ತು ಪ್ರಾರ್ಥನೆ ಸಲ್ಲಿಸಿದರು. ಲೋಕು ಪಾಂಡು ಚವ್ಹಾಣ, ಸಿದ್ದಪ್ಪ ಪೂಜಾರಿ, ಬಸವಂತ ಪೂಜಾರಿ, ರುಹುಲಕುದ್ದುಸ ಜೆ. ಇನಾಮದಾರ ಹಿಂದು ಮುಸ್ಲಿಮ ಸೇರಿದಂತೆ ಸಾಮರಸ್ಯ ಭಾವೈಕ್ಯತೆಯಿಂದ ಭಾಗವಹಿಸಿ ಉರುಸನ್ನು ಆಚರಿಸಿದರು