ಪೀಡಿತ ಪ್ರದೇಶ ಘೋಷಿಸಲು ಆಗ್ರಹ


ಶಿರಹಟ್ಟಿ,ಸೆ.5: 2020-2023 ರ ವರ್ಷವನ್ನು ಸರಕಾರ ಸಂಪೂರ್ಣ ಬರಗಾಲವೆಂದು ಘೋಷಿಸಬೆಕು. ಈ ವರ್ಷ ಮಳೆ ಬಾರದೇ ಇರುವುದರಿಂದ ರೈತರು ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ. ಬಿತ್ತಿದ ಬೆಳೆ ಸಂಪೂರ್ಣ ಬಾಡಿದೆ. ಸಾಕಷ್ಟು ಹಣವನ್ನು ವ್ಯೆಯಮಾಡಿ ಬೆಳೆ ಬಾರದಂತಾಗಿದ್ದರಿಂದ ರೈತರು ಹತಾಶೆಗೆಗೊಳಾಗಿದ್ದಾರೆ. ಆದ್ದರಿಂದ ಶಿರಹಟ್ಟಿ ತಾಲೂಕ್ನ್ನು ಬರಗಾಗಲ ಪೀಡಿತ ಪ್ರದೇಶವೆಂದು ಘೋಷಿಸಿ ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ಶಿರಹಟ್ಟಿ ತಾಲೂಕ ಘಟಕದ ಪದಾಧಿಕಾರಿಗಳು ಒತ್ತಯಿಸಿದ್ದಾರೆ.
ಶಿರಹಟ್ಟಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಭಾರತೀಯ ಕಿಸಾನ ಸಂಘ ಶಿರಹಟ್ಟಿ ತಾಲೂಕನ್ನು ಬರಗಾಲ ಪ್ರದೇಶವನ್ನು ಗೋಷಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಾರತಿಯ ಕಿಸಾನ ಸಂಘದ ಉತ್ತರ ಪ್ರಾಂತದ ಸಂಚಾಲಕ ವೀರಣ್ಣ ಮಜ್ಜಗಿ, ಮತ್ತು ತಾಲೂಕ ಪ್ರಾಂತದ ಕಾರ್ಯದರ್ಶಿ ರಮೇಶ ಕೋಳೀವಾಡ ಮಾತನಾಡಿ, ಬಿತ್ತನೆ ಮಾಡಿ ಬೆಳೆಗಳು ಮಳೆ ಇಲ್ಲದ ಕಾರಣ ಬಾಡಿವೆ. ಮುಂಗಾರು ಮಳೆ ಸಮಯ ಮುಗಿಯುತ್ತಾ ಬಂದರು ಸಹಿತವಾಗಿ ಮಳೆ ಬಾರದೇ ಇರುವುದರಿಂದ ಸಕಷ್ಟು ಹಾನಿಯಾಗಿದೆ.ಆದ್ದರಿಂದ ಬೆಳೆ ಹಾನಿ ಮತ್ತು ಬೆಳೆ ವಿಮೆಯನ್ನು ಸಕಾಲಕ್ಕೆ ರೈತರಿಗೆ ಒದಗಿಸಲು ಬರಗಾಲ ಪ್ರದೇಶವೆಂದು ಘೋಷಿಸಬೆಕೆಂದು ಅಗ್ರಹಿಸಿದರು. ನೀರಾವರಿ ಹೊಂದಿರುವ ರೈತರಿಗೆ 7 ಗಂಟೆಗಳ ಕಾಲ ವಿದ್ಯುತ ಸರಿಯಾಗಿ ನೀಡಬೇಕು ಸಂಕಷ್ಟದಲ್ಲಿರುವ ರೈತರಿಗೆ ಸರಕಾರ ಕೂಡಲೇ ಸ್ಪಂದಿಸಬೇಕು. ಶಿರಹಟ್ಟಿ ತಾಲೂಕಿನ ರೈತರ ಹಿತಕಾಯಬೆಕೆಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್.ವಿ ಮಲ್ಲಾಡದ, ಈರಪ್ಪ ಯಾದಗೇರಿ,ಶಿವಾನಂದಪ್ಪ ದಲಾಲಿ, ನಬಿಸಾಬ ತಹಶೀಲ್ದಾರ, ಶಿವಾನಂದ ಕುರಬರ,ಮಲ್ಲವ್ವ ಕುಳಗೇರಿ, sಶಿವಪುತ್ರಪ್ಪ ನೆಲಗುಡ್ಡದ, ಶಂಕರಗೌಡ ಪಾಟೀಲ್, ಶಿವಾನಂದಪ್ಪ ದಲಾಲಿ, ಚಂದ್ರಪ್ಪ ಹೊಸಮನಿ, ಗುಡದಪ್ಪ ನೋಟದಾಳ, ಮಾಲಿಂಗಪ್ಪ ಹೊನ್ನಪ್ಪನವರ, ಬಸವರಾಜ ಹರಿಜನ, ಸೋಮಣ್ಣಲಮಾಣಿ, ಮಲ್ಲಪ್ಪ ಕದಾಂಪೂರ, ಫಕ್ಕಿರಪ್ಪ ತಳವಾರ, ಹನುಮಂತಪ್ಪ ಕಾಶಣ್ಣವರ,ಬಸವರಾಜ ಮಳ್ಳಣ್ಣವರ, ಸೋಮಣ್ಣಲಮಾಣಿ ಮುಂತಾದವರು ಉಪಸ್ಥಿತರಿದ್ದರು,