ಪಿ. ವೀಣಾಗೆ ಪಿಹೆಚ್‌ಡಿ ಪದವಿ

ದಾವಣಗೆರೆ.ಜ.೧೦: ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಆಗಿರುವ ವೀಣಾ ಪಿ., ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿ ಪ್ರದಾನ ಮಾಡಿದೆ.ಹರಿಹರದ ಕೆ.ಎಸ್. ಪ್ರಭಾಕರ್ ಹಾಗೂ ರೂಪ ಪ್ರಭಾಕರ್ ದಂಪತಿಯ ಪುತ್ರಿಯಾದ ವೀಣಾ ಅವರು ಕುವೆಂಪು ವಿಶ್ವವಿದ್ಯಾಲಯ ಹಾಗೂ ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ಎಸ್.ಎ. ಬಾರಿ ಇವರ ಮಾರ್ಗದರ್ಶನದಲ್ಲಿ ಸಮಕಾಲೀನ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ಜಲ ಸಂಬಂಧಿತ ವಿವಾದಗಳು-ಒಂದು ಐತಿಹಾಸಿಕ ವಿಶ್ಲೇಷಣೆ ವಿಷಯ ಕುರಿತು ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಮಹಾಪ್ರಬಂಧ ಮಂಡಿಸಿದ್ದರು.