ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ

ಅಫಜಲಪುರ: ಎ.24:ತಾಲೂಕಿನ ಹವಳಗಾ ಗ್ರಾಮದ
ಶ್ರೀ ರೇಣುಕಾ ಶುಗರ್ಸ್ ಡೆವೆಲಪ್ ಮೆಂಟ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಧಾರವಾಡದ ಹಂಚಿನಮನಿ ಕ್ಲಾಸಸ್ ಇವರ ಶೈಕ್ಷಣಿಕ ಸಹಯೋಗದೊಂದಿಗೆ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶೇ. 100ರಷ್ಟು ಬಂದಿದೆ.
2022-23ನೇ ಸಾಲಿನಲ್ಲಿ 35 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ಜ್ಯೋತಿ ಗುರುರಾಜ ಆಹೇರಿ ವಿದ್ಯಾರ್ಥಿನಿ 600ಕ್ಕೆ 578(96.33%)ಅಂಕ ಪಡೆದು ಕಾಲೇಜಿಗೆ ಮತ್ತು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿ ಕನ್ಯಾಕುಮಾರಿ ಹೂಗಾರ ರಾಸಾಯನಶಾಸ್ತ್ರದ ವಿಷಯದಲ್ಲಿ 600ಕ್ಕೆ 566(94.33%) ಅಂಕ, ಪ್ರಿಯಾ ರಜಪೂತ್ 600ಕ್ಕೆ 555(92.5%) ಅದೇ ರೀತಿ ವಿದ್ಯಾರ್ಥಿ ಚಿನ್ಮಯ ಶಹಬಾದಿ 600ಕ್ಕೆ 543(90.5%) ಅಂಕಗಳನ್ನು ಗಳಿಸಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುವುದಕ್ಕೆ ಎಸ್ ಆರ್ ಎಸ್ ಡಿ ಎಫ್ ಅಧ್ಯಕ್ಷರಾದ ವಿದ್ಯಾ ಮುರುಕುಂಬಿ, ಜನರಲ್ ಮ್ಯಾನೇಜರ್, ಪ್ರಾಂಶುಪಾಲರು, ಉಪನ್ಯಾಸಕರು ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.