ಪಿ.ಯು. ಮೌಲ್ಯಮಾಪನ ಕೇಂದ್ರಗಳನ್ನು ವಿಕೇಂದ್ರಿಕರಿಸಲು ಮನವಿ – ಎಸ್.ವ್ಹಿ.ಸಂಕನೂರ

ಧಾರವಾಡ ಎ.17- ರಾಜ್ಯದಲ್ಲಿ ಕೊರೋನಾ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣದಿಂದ ಮತ್ತು ತಜ್ಞರ ಸಮಿತಿ ಕಠಿಣವಾದ ಮುಂಜಾಗ್ರತೆ ಕ್ರಮಗಳನ್ನು ಕೈಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬರುವ ತಿಂಗಳಲ್ಲಿ ಜರುಗಲಿರುವ ದ್ವಿತೀಯ ಪಿ.ಯು.ಸಿ ಮೌಲ್ಯಮಾಪನ ಕೇಂದ್ರಗಳನ್ನು ವಿಭಾಗ ಹಾಗೂ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಬೇಕೆಂದು ಶ್ರೀಮತಿ ಆರ್ ಸ್ನೇಹಲ್, ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಇವರಿಗೆ ಎಸ್.ವಿ. ಸಂಕನೂರ ಅವರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

         ವಿಶೇಷವಾಗಿ ವಿಜ್ಞಾನ ವಿಷಯಗಳ ಮೌಲ್ಯಮಾಪನ ಸಂಪೂರ್ಣವಾಗಿ ಬೆಂಗಳೂರು ನಗರಕ್ಕೆ ಸೀಮಿತವಾಗಿರುವುದನ್ನು, ಈ ಬಾರಿ ಕಡ್ಡಾಯವಾಗಿ ರಾಜ್ಯದ ನಾಲ್ಕು ವಿಭಾಗಗಳಿಗೆ ವಿಕೇಂದ್ರಿಕರಿಸಲು ಈ ಮೂಲಕ ಮನವಿಮಾಡಲಾಗಿದೆ.

         ಕಳೆದ ವರ್ಷ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಅತೀ ಹೆಚ್ಚಿನ ಉತ್ತರ ಪತ್ರಿಕೆಗಳು ಇರುವ ಕನ್ನಡ, ಅರ್ಥಶಾಸ್ತ್ರ ಹಾಗೂ ಇತಿಹಾಸ, ಸಮಾಜ ಶಾಸ್ರ?ತ, ವಿಷಯಗಳ ಮೌಲ್ಯಮಾಪನ ಕಾರ್ಯವನ್ನು ಬೆಳಗಾಂವಿ, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮಡ್ಯ ಚಿಕ್ಕಮಗಳೂರು, ಚಾಮರಾಜನಗರ, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಕೂಡಾ ಜರುಗಿಸಲಾಗಿತ್ತು. ಇದು ಅಲ್ಲದೆ ವಿಶೇಷವಾಗಿ ಆಂಗ್ಲ ಭಾಷೆ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ 23 ಜಿಲ್ಲೆಗಳಲ್ಲಿ ನಡೆಸಲಾಗಿರುವುದು.ಈ ಎಲ್ಲಾ ಹಿಂದಿನ ಮೌಲಮಾಪನ ಕೇಂದ್ರಗಳನ್ನು ಈ ವರ್ಷವೂ ಮುಂದುವರೆಸಿಕೊಂಡು ಹೋಗಲು ವಿಧಾನ ಪರಿಷತ್ತ ಸದಸ್ಯ ಎಸ್.ವಿ. ಸಂಕನೂರ ಒತ್ತಾಯಿಸಿದ್ದಾರೆ.