ಪಿ ಮತ್ತು ಕೆ ರಸಗೊಬ್ಬರಗಳ ಎನ್.ಬಿ.ಎಸ್ ದರ ಪರಿಷ್ಕರಣೆ

ವಿಜಯಪುರ, ಮೇ.26-ಭಾರತ ಸರ್ಕಾರವು ದಿ.20-05-2021ರ ಸೂಚನೆ ಅನುಗುಣವಾಗಿ ಪಿ ಮತ್ತು ಕೆ ರಸಗೊಬ್ಬರಗಳ (ಎನ್.ಬಿ ಎಸ್) ದರಗಳನ್ನು ಪರಿಷ್ಕರಿಸಿದೆ. ದಿ.20-5-21 ರಿಂದ ಚಾಲನೆ ಬರುವಂತೆ ಎಲ್ಲ ರಸಗೊಬ್ಬರ ಕಂಪನಿಗಳ ಡಿ.ಎ.ಪಿ ಮತ್ತು ಎನ್. ಪಿ ಹಾಗೂ ಎನ್.ಪಿ.ಕೆ ರಸಗೊಬ್ಬರಗಳ ದರಗಳು ಈ ಕೆಳಗಿನಂತಿವೆ ಎಂದು ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಉತ್ಪನ್ನ ಹಾಗೂ 20 -5 -2021 ರಿಂದ ಚಾಲ್ತಿಗೆ ಬರುವ ಹೊಸ ದರ( ಪ್ರತಿ ಚೀಲಕ್ಕೆ ) ಈ ರೀತಿ ಇದ್ದು,
ಡಿ. ಎ. ಪಿ =1200 ರೂ, 10-26-26=1375 ರೂ, 12-32-16=1310 ರೂ, 19-19-19=1575 ರೂ, 20-20-0-13=1090 ರೂ,
28-28-0=1475 ರೂ ಹಾಗೂ 14-35-14=1365 ರೂ. ಇದೆ ಎಂದು ವಿವರಿಸಿದ್ದಾರೆ.
ಎಲ್ಲ ವಿತರಕರು ಹಾಗೂ ರಿಟೇಲ್ ವ್ಯಾಪಾರಿಗಳು ಕಂಪನಿಗಳ ರಸಗೊಬ್ಬರಗಳನ್ನು ಮೇಲೆ ತಿಳಿಸಿದ ಎಂ.ಆರ್.ಪಿ ಮಾರಾಟ ಮಾಡಲು ನಿರ್ದೇಶಿಸಲಾಗಿದ್ದು, ಈ ಮೇಲಿನ ಎಂ ಆರ್ ಪಿ ದರಗಳು ಹೆಚ್ಚಿನ ಎಂ ಆರ್ ಪಿ ದರದ ದಾಸ್ತಾನಿಗೂ ಸಹ ಅನ್ವಯಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಪಿ.ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.