ಪಿ.ಪಿ.ಇ ಕಿಟ್ ಧರಿಸಿ ಶಾಸಕರು ಸೆಂಟರ್ ವೀಕ್ಷಣೆ

ಸಿಂಧನೂರು.ಮೇ.೧೪-ಪಿ.ಪಿ ಇ ಕಿಟ್ ಧರಿಸಿ ವೈದ್ಯರೊಂದಿಗೆ ಮಾಜಿ ಮಂತ್ರಿ ಶಾಸಕ ವೆಂಕಟರಾವ್ ನಾಡಗೌಡ ಕೊವಿಡ್ ಸೆಂಟರ್ ನಲ್ಲಿ ಇರುವ ಸೊಂಕಿತರನ್ನು ಮಾತನಾಡಿಸಿ ಅವರ ಆರೋಗ್ಯ ವಿಚಾರಿಸಿ ಏನು ಆಗುವುದಿಲ್ಲ ದೈರ್ಯದಿಂದ ಇರಿ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಾರೆ ಬೇಗ ಗುಣಮುಖರಾಗಿ ಮನೆಗೆ ಹೋಗುತ್ತಿರಿ ಎಂದು ಸೊಂಕಿತರಿಗೆ ಶಾಸಕರು ಆತ್ಮ ದೈರ್ಯ ತುಂಬಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಕೊವಿಡ್ ಸೆಂಟರ್‌ಗೆ ಭೇಟಿ ನೀಡಿ ಸೊಂಕಿತರನ್ನು ಕಡೆ ಗಣಿಸದೆ ಕಾಳಜಿಯಿಂದ ಹಾಗು ಮಾನವಿಯತೆಯಿಂದ ಚಿಕಿತ್ಸೆ ನೀಡಿ ನಿರ್ಲಕ್ಷೆ ಮಾಡಬೇಡಿ ಎಂದು ವೈದ್ಯರು ಗಳಿಗೆ ತಾಕೀತು ಮಾಡಿದ ಅವರು ಸೊಂಕಿತರ ಪ್ರತಿ ದಿನದ ಆರೋಗ್ಯದ ಬಗ್ಗೆ ಅವರ ಕುಟುಂಬಸ್ಥರ ಮೊಬೈಲ್ ಗಳಿಗೆ ಮಾಹಿತಿ ನೀಡಬೇಕು ಅಲ್ಲದೆ ಸೊಂಕಿತರನ್ನು ಯಾರು ಭೇಟಿಯಾಗದಂತೆ ನೋಡಿಕೊಳ್ಳಿ ಸಾದ್ಯವಾದರೆ ಬ್ಯಾರಿಕೇಡ್ ಹಾಕಿ ಎಂದ ವೈದ್ಯರಿಗೆ ಶಾಸಕರು ಹೇಳಿದರು.
ಕೊವಿಡ್ ಸೆಂಟರ್ ನಲ್ಲಿ ಇರುವ ಪ್ರತಿಯೊಬ್ಬ ಸೊಂಕಿತರನ್ನು ಶಾಸಕರು ಮಾತನಾಡಿಸಿ ನಿಮೆಗೇನಾದರು ತೊಂದರೆ ಇದೆಯಾ ವೈದ್ಯರ ಸರಿಯಾಗಿ ನೋಡುತ್ತಾರ ಎಂದು ಮಾಹಿತಿ ಪಡೆದು ಕೊಂಡರು.
ಗ್ರಾಮೀಣ ಭಾಗದಿಂದ ಬಂದು ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ವಸತಿ ಸಮಸ್ಯೆ ಇದೆ ಎಂದು ೧೨ ಜನ ಸಿಬ್ಬಂದಿಗಳು ಶಾಸಕರಲ್ಲಿ ಮನವಿ ಮಾಡಿಕೊಂಡಾಗ ಅವರಿಗೆ ಲಾಡ್ಜನಲ್ಲಿ ವಸತಿ ಕಲ್ಪಿಸಿ ಕೊಡುವಂತೆ ಆಸ್ಪತ್ರೆ ಮುಖ್ಯವೈದ್ಯಾದಿಕಾರಿಗಳಿಗೆ ತಿಳಿಸಿದರು.
ಆಸ್ಪತ್ರೆಯಲ್ಲಿ ಔಷಧಿ ವಿತಕರ ಜಗಳ ಕಂಡು ಬೇಸರಗೊಂಡ ಶಾಸಕರು ಮರಿ ಶಾಂತ ವೀರಸ್ವಾಮಿಗೆ ಚಾರ್ಜ್ ಹಾಕಿದ್ದರು ಸಹ ಔಷಧಿ ಕೊಡದೆ ಬೀಗ ಹಾಕಿದ್ದನ್ನು ಕಂಡು ಸಿಡಿ-ಮಿಡಿ ಗೊಂಡ ಶಾಸಕರು ಔಷಧ ಮಳಿಗೆ ತೆಗಿಸಿ ಕರ್ತವ್ಯದಲ್ಲಿ ನಿರ್ಲಕ್ಷೆ ತೋರಿದ ಔಷಧಿ ವಿತರಕ ಮರಿ ಶಾಂತ ವೀರಸ್ವಾಮಿ ಯನ್ನು ತಕ್ಷಣ ಅಮಾನತ್ತು ಮಾಡುವಂತೆ ಶಾಸಕರು ಡಿ.ಎಚ್.ಓ ಅವರಿಗೆ ಸೂಚನೆ ನೀಡಿದ ಆವರು ಕೊರೊನಾ ಸಮಯದಲ್ಲಿ ಎಲ್ಲರು ಹೊಂದಾಣಿಕೆ ಯಿಂದ ಕೆಲಸ ಮಾಡಬೇಕು ಕೆಲಸದ ಬಗ್ಗೆ ಅಲಕ್ಷ್ಯ ಮಾಡಿದ ನಿರ್ಲಕ್ಷೆ ತೋರಿದವರ ಮೇಲೆ ಕೂಡಲೆ ಕ್ರಮ ತಗದೆಕೊಳ್ಳುವಂತೆ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಹನುಮಂತ ರೆಡ್ಡಿಗೆ ಎಚ್ಚರಿಕೆ ನೀಡಿದರು.
ಆಸ್ಪತ್ರೆಯಲ್ಲಿ ೨೧ ಬೆಡ್ ಗಳಲ್ಲಿ ೨೧ ಜನ ಸೊಂಕಿತರು ದಾಖಲಾಗಿದ್ದು ಇಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೆ ಎರಡು ಜನ ಸೊಂಕಿತರು ಮರಣಯೊಂದಿದ್ದಾರೆಂದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಪತ್ರಿಕೆಗೆ ತಿಳಿಸಿದರು.
ಇದೆ ಸಂದರ್ಭದಲ್ಲಿ ಜೆ.ಡಿ.ಎಸ್ ನಗರ ಸಭೆ ಸದಸ್ಯರಾದ ದಾಸರಿ ಸತ್ಯನಾರಾಯಣ ಆಸ್ಪತ್ರೆಯ ೫೦ ಸಿಬ್ಬಂದಿಗಳಿಗೆ ಉಚಿತವಾಗಿ ಮುಖ ಕವಚಗಳನ್ನು ಶಾಸಕರಿಂದ ಸಿಬ್ಬಂದಿಗಳಿಗೆ ವಿತರಿಸಿದರು.
ನಗರಸಭೆ ಸದಸ್ಯರಾದ ದಾಸರಿ ಸತ್ಯನಾರಾಯಣ ,ತಾಲೂಕ ವೈದ್ಯಾಧಿಕಾರಿ ಡಾ.ಅಯ್ಯನಗೌಡ ,ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಹನುಮಂತ ರೆಡ್ಡಿ ,ಡಾ.ಜೀವನೇಶ್ವರಯ್ಯ ಸೇರಿದಂತೆ ಇತರರು ಶಾಸಕರ ಜೊತೆ ಹಾಜರಿದ್ದರು.