ಪಿ.ಡಿ.ಹಳ್ಳಿಯಲ್ಲಿ ಸಿಪಿಐ (ಎಂ) ಶಾಖೆ ಉದ್ಘಾಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.02:  ತಾಲೂಕು ಪರಮದೇವನ ಹಳ್ಳಿ ಯಲ್ಲಿಂದು ಭಾರತ ಕಮ್ಯುನಿಷ್ಟ ಪಕ್ಷ (ಮಾರ್ಕ್ಸವಾದಿ ) ದ ಶಾಖೆ ಉದ್ಘಾಟನೆಗೊಂಡಿತು.    .
ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜೆ. ಸತ್ಯಬಾಬು, ಮಾತನಾಡಿ ಈ ಭಾಗದ ರೈತ ಕಾರ್ಮಿಕರ ಸಮಸ್ಯೆಗಳ ಕುರಿತು ಪಕ್ಷ ಚಿತ್ರ ನಡೆಸಲಿದೆಯಲ್ಲದೆ ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಹೋರಾಟ ನಡೆಸಲು ಮುಂದಾಗುತ್ತದೆ. ಇದಕ್ಕೆ ರೈತ ಕಾರ್ಮಿಕರು ಸಹಕಾರ ನೀಡಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಘಟಕದ ಕಾರ್ಯದರ್ಶಿ ಚಂದ್ರಕುಮಾರಿ ಮಾತನಾಡಿ, ದುಡಿಯುವ ಜನರ ಹಿತ ರಕ್ಷಣೆ ಪಕ್ಷದ ಉದ್ದೇಶವಾಗಿದೆ.  ಈ ಭಾಗದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಪಕ್ಷ ಹೋರಾಡಲು ಮಹಿಳೆಯರ ಸಂಘಟನೆ ರಚಿಸಲಿದೆ ಎಂದರು. ಸಭೆಯಲ್ಲಿ  ಹೊನ್ನೂರ್ ಸಾಬ್ ರವರು ಸರ್ವಾನುಮತದಿಂದ ಕಾರ್ಯದರ್ಶಿಯಾಗಿ ಆಯ್ಕೆ ಗೊಂಡರು.
ವೇದಿಕೆಯಲ್ಲಿ ಯು. ಯರ್ರಿಸ್ವಾಮಿ, ಓಂಕಾರಮ್ಮ,  ಕಿರಣ ಕುಮಾರಿ, ಕೆ.ಈರಮ್ಮ, ಪಿ.ಆರ್. ವೆಂಕಟೇಶ್,  ಹೊನ್ನೂರ್ ಸಾಬ್, ಜಿ.ಎನ್ ಯರ್ರಿಸ್ವಾಮಿ, ಇದ್ದರು.
ಪಿ.ಲೋಕೇಶ್ ಸ್ವಾಗತಿಸಿದರೆ, ಬೈಲು ಹನುಮಂತಪ್ಪ ವಂದಿಸಿದರು.

One attachment • Scanned by Gmail