ಪಿ.ಡಿ.ಜೆ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳ ಪ್ರಶಂಸ ಪತ್ರ

ವಿಜಯಪುರ, ಮಾ.28-ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ. ವಿಜಯಪುರ ಅಡಿಯಲ್ಲಿ ಬರುವ ಪಿ.ಡಿ.ಜೆ. ಪದವಿಪೂರ್ವ ಮಹಾವಿದ್ಯಾಲಯ ಮಾಧ್ಯಮಿಕ ವಿಭಾಗದ ಎನ್.ಸಿ.ಸಿ. ಘಟಕದಲ್ಲಿ 100 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.
ಪ್ರತಿ ವರ್ಷ ಕರ್ನಾಟಕ ಸರಕಾರ ಕೊಡಮಾಡುವ ಮುಖ್ಯಮಂತ್ರಿಗಳ ಪ್ರಶಂಸ ಪತ್ರವನ್ನು (ಅhieಜಿ ಒiಟಿisಣeಡಿ ಅommeಟಿಜಚಿಣioಟಿ ಅeಡಿಣiಜಿiಛಿಚಿಣe) 36 ಕರ್ನಾಟಕ ಬಟಾಲಿಯನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಮಾಂಡಿಂಗ್ ಆಫೀಸರಾದ ಕರ್ನಲ್ ಎ.ಎಂ. ವೆಳನಕರ ಹಾಗೂ ಆಡಳಿತ ಅಧಿಕಾರಿ ಮೇಜರ್ ಶೃತಿ ನಯ್ಯರ ಇವರ ಉಪಸ್ಥಿತಿಯಲ್ಲಿ ಪಿ.ಡಿ.ಜೆ ಶಾಲೆಯ ಎನ್.ಸಿ.ಸಿ. ಕೆಡಟ್ಸ್‍ಗಳಾದ ಸುನಧಿ ಕಡಿವಾಳ ಹಾಗೂ ಆಯುಷ ನೀಲಣ್ಣವರ ಇವರಿಗೆ ಕೊಡಲಾಯಿತು.
ಶಾಲಾ ಹಂತದಲ್ಲಿ ಮಕ್ಕಳಲ್ಲಿ ರಾಷ್ಟ್ರೀಯತೆಯ ಉನ್ನತ ದೇವದರ್ಶಗಳನ್ನು ಒಡಮೂಡಿಸಿ ಸಹೋದರತೆ, ಶಿಸ್ತು, ತ್ಯಾಗ, ಬಲಿದಾನ, ಸಮರ್ಪಣಾ ಭಾವ, ಬದ್ಧತೆ, ಕಠಿಣ ಪರಿಶ್ರಮದ ಮೂಲಕ ಉನ್ನತ ಗುಣಮಟ್ಟದ ಪ್ರಜೆಗಳನ್ನು ಸೃಷ್ಠಿಸುವ ಪವಿತ್ರ ಕಾರ್ಯವನ್ನು ನಮ್ಮ ಶಾಲೆ ಎನ್.ಸಿ.ಸಿ. ಘಟಕ ಮಾಡುತ್ತಿದೆ.